ಸಮಾಜ ಒಡೆಯುವ ಕೆಲಸ ಯಾರೂ ಮಾಡಬಾರದು: ರಂಭಾಪುರಿ ಮಠದ ಶ್ರೀ

ಸಮಾಜ ಒಡೆಯುವ ಕೆಲಸ ಯಾರೂ ಮಾಡಬಾರದು: ರಂಭಾಪುರಿ ಮಠದ ಶ್ರೀ
Published on

ಹಾಸನ: ಎಲ್ಲರೂ ಸಮಾಜ ಒಂದುಗೂಡಿಸುವ ಕೆಲಸ ಮಾಡಬೇಕೇ ಹೊರತು ಕುರೂಪಗೊಳಿಸುವ ಕೆಲಸ ಮಾಡಬಾರದು ಎಂದು ರಂಭಾಪುರಿ ಮಠದ ಶ್ರೀ ಹೇಳಿದರು.
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಸಂಬಂಧ ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶ್ರೀಗಳು, ಪ್ರತಿಯೊಬ್ಬರೂ ಸಮಾಜ ಒಂದುಗೂಡಿಸುವ, ಒಡೆದು ಹೋದಂತಹ ಜನರ ಮನೋಭಾವನೆ ಬೆಸೆಯುವ ಕೆಲಸ ಮಾಡಬೇಕು. ಜನರ ಭಾವನೆಗಳನ್ನು ಛಿದ್ರಗೊಳಿಸುವ ಕೆಲಸ ಯಾರೂ ಕೂಡ ಮಾಡಬಾರದು. ಚುನಾವಣೆಯಲ್ಲಿ ಸೋಲು- ಗೆಲುವು ಸಹಜ. ಗೆದ್ದಾಗ ಯಾವುದೊ ಉತ್ಪ್ರೇಕ್ಷೆಯಲ್ಲಿ ಇಲ್ಲಸಲ್ಲದ ಮಾತುಗಳನ್ನಾಡುವುದು ಈ ದೇಶಕ್ಕೆ, ನಾಡಿನ ಜನತೆಗೆ ಶೋಭೆ ತರುವಂತದಲ್ಲ ಎಂದರು.
ಪ್ರತಿಯೊಬ್ಬರೂ ಜವಾಬ್ದಾರಿ ಸ್ಥಾನದಲ್ಲಿರುವಂತಹವರು. ಅದನ್ನು ಅರಿತು ಮಾತನಾಡಬೇಕೇ ಹೊರತು ಮತ್ತಷ್ಟು ಸಂಘರ್ಷಕ್ಕೆ ಕಾರಣವಾಗುವಂತಹ ಹೇಳಿಕೆಗಳನ್ನು ಯಾವುದೇ ರಾಜಕಾರಣಿಗಳು ನೀಡಬಾರದು. ಈಗ ಧರ್ಮ ಮತ್ತು ಜಾತಿಗಳ ಮಧ್ಯೆ ವ್ಯಾಪಕವಾದ ಸಂಘರ್ಷ ನಡೆಯುತ್ತಿದೆ. ಇಂತಹ ಸಂಘರ್ಷಕ್ಕೆ ಕೆಲವು ರಾಜಕಾರಣಿಗಳು ಪುಷ್ಟಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಅಂತಹದ್ದನ್ನು ಯಾವತ್ತೂ ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವಂತಹ ಬಹುದೊಡ್ದ ಸಂದೇಶವನ್ನು ಕರ್ನಾಟಕ ನಾಡಿಗೆ ಕೊಟ್ಟಿದೆ. ಸ್ವ-ಧರ್ಮದಲ್ಲಿ ನಿಷ್ಠೆ, ಪರ ಧರ್ಮದಲ್ಲಿ ಸಹಿಷ್ಣುತೆ ಇರಿಸಿಕೊಂಡು ನಡೆಯುವ ಅವಶ್ಯಕತೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net