ಸಮಾಜ ಒಡೆದು ಮತ ಬೇಟೆಗಿಳಿದ ರಾಷ್ಟ್ರೀಯ ಪಕ್ಷಗಳು : ಮಾಜಿ ಸಿಎಂ ಎಚ್‌ಡಿಕೆ ಆರೋಪ

1
Published on

ಚನ್ನಪಟ್ಟಣ: ಎರಡು ರಾಷ್ಟ್ರೀಯ ಪಕ್ಷಗಳು ಸಮಾಜವನ್ನು ಒಡೆದು ಮತ ಬೇಟೆಗೆ ಹೊರಟಿವೆ. ಮತಕ್ಕಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಈ ಪಕ್ಷಗಳೇ ರಾಜ್ಯದಲ್ಲಿ ಕೋಮು ಸೌಹಾರ್ದತೆ ಹಾಳಾಗಲು ಪ್ರಮುಖ ಕಾರಣ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ನಗರದ ಬಡಾ ಮಕಾನ್‌ನಲ್ಲಿರುವ ಆಖಿಲ್ ಷಾ ದರ್ಗಾಕ್ಕೆ ಶನಿವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಮವಸ್ತ್ರದ ವಿಚಾರವಾಗಿ ಆರಂಭವಾದ ಗಲಭೆ ಇಡೀ ರಾಜ್ಯದಲ್ಲಿ ಸಂರ್ಷಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದು ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸಿದೆ. ನಾನು ಅಧಿಕಾರದಲ್ಲಿದ್ದ ಎಂದಿಗೂ ಹಿಂದು - ಮುಸ್ಲಿಂ ಗಲಾಟೆಯಾಗಲು ಅವಕಾಶ ಕೊಟ್ಟಿಲ್ಲ. ಆದರೆ, ಈಗ ಯಾಕೆ ಇಂತಹ ಘಟನೆಗಳು ವೈಭವೀಕರಣವಾಗುತ್ತಿವೆ. ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ಇಂತಹ ಘಟನೆಗಳು ಏಕೆ ಉದ್ಭವವಾಗುತ್ತದೆ ಎಂದು ಪ್ರಶ್ನಿಸಿದರು.

ಶಿವಮೊಗ್ಗದ ಘಟನೆ ಸೇರಿ ಯಾವುದೇ ಘಟನೆಇರಬಹುದು, ಇದಕ್ಕೆಲ್ಲ ಯಾರು ಹೊಣೆ? ಏಕೆ ಈ ರೀತಿಯ ವಾತಾವರಣ ನಿರ್ವಾಣ ಆಗುತ್ತಿದೆ. ಈ ಬಗ್ಗೆ ಚರ್ಚೆಯಾಗಬೇಕು. ಕಾಂಗ್ರೆಸ್ ನಾಯಕರು ಈ ವಿಚಾರವನ್ನು ಚರ್ಚೆ ಮಾಡುವುದಿಲ್ಲ. ಜೆಡಿಎಸ್ ಬಗ್ಗೆ ಚರ್ಚೆ ಮಾಡುವುದೇ ಅವರಿಗೆ ಮುಖ್ಯವಾಗಿದೆ. ಅವರು ಜೆಡಿಎಸ್‌ನ್ನು ಬಿಜೆಪಿಯ ಬಿ ಟೀಂ ಎನ್ನುತ್ತಾರೆ. ಇವತ್ತು ಸಮಾಜದ ಈ ಕೆಟ್ಟ ಪರಿಸ್ಥಿತಿಗೆ ನಿಮ್ಮ ಕೊಡುಗೆ ಏನು. ಕಾಂಗ್ರೆಸ್‌ನವರು ಏನು ಮಾಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ನಾನು ಯಾರ ಪರವೂ ಇಲ್ಲ, ಯಾವತ್ತಿದ್ದರೂ ಜನತೆ ಪರವಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ಶಿವಮೊಗ್ಗದಲ್ಲಿ ಆದಂತಹ ಜೀವ ಹಾನಿ ಹಿನ್ನೆಲೆಯಲ್ಲಿ ನೋವಿನಲ್ಲಿರುವ ಆ ಕುಟುಂಬದ ಸಹೋದರಿಯ ಮಾತುಗಳು ಏನು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಈ ದೇಶದಲ್ಲಿ ಯಾವ್ಯಾವ ರೀತಿ ಗಲಭೆಗಳು ಆಗಿವೆ, ಇದಕ್ಕೆ ಯಾವ ಪಕ್ಷದವರು ಕಾರಣ. ಗಲಭೆಗಳ ವಿರುದ್ಧ ಹೋರಾಡಿದವರು ಯಾರು, ಜನರ ರಕ್ಷಣೆ ಯಾರು ಮಾಡಿದ್ದಾರೆ, ಸಮಾಜದ ರಕ್ಷಣೆ ಯಾರ ಕೈಯಲ್ಲಿ ಸಾಧ್ಯ. ಈ ವಿಷಯಗಳನ್ನು ಇಟ್ಟುಕೊಂಡು ಹೋರಾಟ ಮಾಡಲು ನಿರ್ಧರಿಸಿದ್ದೇನೆ. ಮುಂದಿನ 1 ವರ್ಷ ಎಲ್ಲ ವಿಚಾರಗಳ ಬಗ್ಗೆ ಹೋರಾಟ ಮಾಡುತ್ತೇನೆ ಎಂದು ಎಚ್‌ಡಿಕೆ ವಾಹಿತಿ ನೀಡಿದರು.

ಡಿಜೆ ಹಳ್ಳಿ ಗಲಭೆಗೆ ಯಾರು ಕಾರಣ?: ಕಾಂಗ್ರೆಸ್‌ನವರು ನಾವು ಅಲ್ಪಸಂಖ್ಯಾತ ಸಮುದಾಯದ ರಕ್ಷಕರು ಎಂದು ೆಸ್ ಕೊಡುತ್ತಾರೆ. ಆದರೆ, ಡಿಜೆ ಹಳ್ಳಿ ಟನೆಗೆ ಕಾರಣಕರ್ತರು ಯಾರು? ಡಿಜೆ ಹಳ್ಳಿಯಲ್ಲಿ ಬೆಂಕಿ ಹಚ್ಚಿದವರು ಯಾರು? ಹಲವಾರು ಅಮಾಯಕರನ್ನು ಪ್ರೇರೇಪಿಸಿ ದೊಂಬಿ ವಾಡಿಸಲಾಯಿತು. ದೊಂಬಿ ಕಾರಣರಾದವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರಿಗೆ ಕಾಂಗ್ರೆಸ್‌ನವರು ರಕ್ಷಣೆ ಕೊಟ್ಟಿದ್ದಾರೆ. ಇವರ ಮಾತು ಕೇಳಿದ ಅವಾಯಕರು ಬಲಿಯಾಗಿದ್ದಾರೆ. ಇವರನ್ನು ನಂಬಿದ ಅವಾಯಕರು ಇವತ್ತು ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂದು ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಚಾರ ಸೇರಿ ಇತರ ವಿಚಾರಗಳನ್ನು ಕಲಾಪದಲ್ಲಿ ಚರ್ಚೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೆ. ಆದರೆ, ಚರ್ಚೆಗೆ ಅವಕಾಶವೇ ದೊರೆಯದಂತೆ ಕಾಂಗ್ರೆಸ್‌ನವರು ನಡೆದುಕೊಂಡರು. ಎರಡು ರಾಷ್ಟ್ರೀಯ ಪಕ್ಷಗಳು ಸವಾಜವನ್ನು ಒಡೆಯಲು ಹೊರಟಿವೆ, ಸಮಾಜದ ಶಾಂತಿ ಹಾಳು ಮಾಡುತ್ತಿದೆ. ರಾಜ್ಯದ ಜನರು ನಡೆಯುತ್ತಿರುವ ಟನೆಗಳ ಬಗ್ಗೆ ಯೋಚಿಸಬೇಕಿದೆ. ಈ ರಾಷ್ಟ್ರೀಯ ಪಕ್ಷಗಳ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎಂದು ಎಚ್‌ಡಿಕೆ ಮನವಿ ಮಾಡಿದರು.

ಯುಪಿಯಲ್ಲಿ 5 ಸೀಟು ಗೆಲ್ಲಲೂ ತಿಣುಕಾಟ: ಸಿಎಎ ವಿರುದ್ಧದ ಹೋರಾಟದಲ್ಲಿ ದೆಹಲಿಯಲ್ಲಿ 53 ಜನ ಸತ್ತರು. ಅದರಲ್ಲಿ 33 ಮಂದಿ ಮುಸ್ಲಿಮರು, 13 ಮಂದಿ ಹಿಂದುಗಳು ಇದ್ದರು. ಇವತ್ತಿನವರೆಗೆ ಕಾಂಗ್ರೆಸ್ ನಾಯಕರು ಇದರ ಬಗ್ಗೆ ಚರ್ಚೆ ಮಾಡಿದ್ದಾರಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಬಾಯಿ ಮಾತಿನಲ್ಲಿ ಮಾತ್ರ ಕಾಂಗ್ರೆಸ್‌ನವರು ಮುಸ್ಲಿಮರ ರಕ್ಷಣೆ ವಾಡುವವರು ಅನ್ನುತ್ತಾರೆ. ಆದರೆ, ಮುಸ್ಲಿಮರ ರಕ್ಷಣೆ ವಿಚಾರ ಬಂದಾಗ ಅವರು ಮಾತೇ ಆಡುವುದಿಲ್ಲ ಎಂದು ಕುಟುಕಿದರು. ರಾಷ್ಟ್ರೀಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್‌ಗೆ ಇವತ್ತು ಉತ್ತರಪ್ರದೇಶದಲ್ಲಿ ನೆಲೆಯೇ ಇಲ್ಲದಂತಾಗಿದೆ. ಅಲ್ಲಿ 5 ಸೀಟ್ ಗೆಲ್ಲಲೂ ತಿಣುಕಾಡುತ್ತಿದ್ದಾರೆ ಎಂದು ಎಚ್‌ಡಿಕೆ ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net