

ಬಸವಕಲ್ಯಾಣ: ಸಮಾಜದ ಅಭಿವೃದ್ಧಿ ಆಗಬೇಕು. ಇದಕ್ಕಾಗಿ ವಿಚಾರ ಮತ್ತು ಆಲೋಚನೆಗೆ ಹೊಸ ತಿರುವ ನೀಡಲು ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಪ್ರೇರಣೆ ನೀಡಲಿ ಎಂದು ಶಾಸಕ ಶರಣು ಸಲಗರ ಹೇಳಿದರು.
ಕಾಂಬಳೆ ವಾಡಿಯಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಲು ಮಾರುವ ಮೂಲಕ ಆರೋಗ್ಯಪೂರ್ಣ ಸಮಾಜ ನಿಮರ್ಾಣದಲ್ಲಿ ನಿಮ್ಮ ಕೊಡುಗೆ ದೊಡ್ಡದು. ಸಮಾಜದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಮದ್ಯ ಆರೋಗ್ಯ ಕೆಡಿಸುತ್ತದೆ. ಹಾಲು ಆರೋಗ್ಯ ವೃದ್ಧಿಸುತ್ತದೆ. ಆದರೆ ಸಾರಾಯಿ ಮಾರುವವರು ಶ್ರೀಮಂತರು, ಹಾಲು ಮಾರುವವರು ಬಡವರಾಗಿ ಉಳಿದಿರುವುದು ವಿಪಯರ್ಾಸ. ಸಮಾಜದಲ್ಲಿ ಜಾಗೃತಿ ಬರಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ಅವರಲ್ಲಿ ಕನಸುಗಳನ್ನು ಬಿತ್ತಬೇಕು. ನಿಮ್ಮೆಲ್ಲರ ಆಸೆ, ಆಕಾಂಕ್ಷೆ, ಕನಸುಗಳು ಶ್ರೀಕೃಷ್ಣ ಪರಮಾತ್ಮ ನನಸು ಮಾಡಲಿ ಎಂದರು.
ಕಾಂಗ್ರೆಸ್ ಮುಖಂಡರಾದ ಮಾಲಾ ಬಿ.ನಾರಾಯಣರಾವ ಮಾತನಾಡಿ, ಶ್ರೀಕೃಷ್ಣರ ಆದರ್ಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುವ ಜತೆಗೆ ಸಮಾಜದ ಪರಂಪರೆ ಮುಂದುವರಿಸಿಕೊಂಡು ಹೋಗುವ ಕಾರ್ಯ ವಾಡಿಗಳಲ್ಲಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಡಿಸಿದರು.
ಜಿಪಂ ಮಾಜಿ ಸದಸ್ಯ ಗುಂಡುರೆಡ್ಡಿ ಮಾತನಾಡಿ, ವಾಡಿಗಳಲ್ಲಿ ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಇಲ್ಲಿ ನಡೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪಪ್ರಾಚಾರ್ಯ ಶಾಹುರಾಜ ಪಾಷ್ಮೆ ಮಾತನಾಡಿದರು. ಗ್ರಾಪಂ ಅಧ್ಯಕ್ಷ ದತ್ತು ಚಿಟ್ಟಂಪಲ್ಲೆ, ತಹಸೀಲ್ದಾರ್ ಸಾವಿತ್ರಿ ಸಲಗರ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭುಸಾರೆ, ಮೇಘರಾಜ ನಾಗರಾಳೆ, ದಿಲೀಪ ಸಿಂಧೆ, ಶೀತಲ ಸಿಂಧೆ, ಹೇಮಂತ ಯಾದವ, ದತ್ತು ಪದ್ಮೆ, ಯುವರಾಜ ಭೆಂಡೆ, ಶ್ರೀನಿವಾಸ ಕಾಂಬಳೆ, ಶಿವು ಶಟಗಾರ, ಮಹಾಪುರಿ ಸೂರ್ಯವಂಶಿ, ಗ್ರಾಮದ ಮುಖಂಡರಾದ ತಾನಾಜಿ ಪಾಟೀಲ್, ಹರಿಕಿಶನ್ ಪಾಷ್ಮೆ, ಮಚ್ಛಿಂದರ್ ಗೋರಲೆ ಇತರರಿದ್ದರು.
ಮುಖಂಡ ಜಾಲಿಂದರ ಗೋರಲೆ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಬೊದ್ದೆ ಸ್ವಾಗತಿಸಿದರು. ಶ್ರೀನಿವಾಸ ಪಾಷ್ಮೆ ವಂದಿಸಿದರು. ಭಾಗವತ ಬೊದ್ದೆ ನಿರೂಪಣೆ ಮಾಡಿದರು.
ಕಾಂಬಳೆ ವಾಡಿಯಲ್ಲಿ ಮಹಿಳೆಯರ 28 ಮತ್ತು ಪುರುಷರ 25 ಸ್ವ-ಸಹಾಯ ಸಂಘಗಳು, 15 ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳಿವೆ. ಜತೆಗೆ ಶ್ರೀಕೃಷ್ಣ ಸಕರ್ಾರಿ ನೌಕರರ ನೌಕರರ ಸಂಘ ಇದೆ. ಮಹಿಳಾ ಸ್ವ ಸಹಾಯ ಸಂಘಗಳಿಗೆ ಕಾರ್ಯಚಟುವಟಿಕೆ ನಡೆಸಲು ಅನುದಾನ ಮಂಜೂರಿಗೆ ಕ್ರಮ ಕೈಗೊಳ್ಳಬೇಕು. ಗ್ರಾಮದ ಕ್ರಾಸ್ಗೆ ಬಸ್ ತಂಗುದಾಣ ನಿಮರ್ಿಸಬೇಕು.
| ಜಾಲಿಂದರ ಗೋರಲೆ, ಮುಖಂಡ