ಸಮಸ್ಯೆಗೆ ರಾಜೀನಾಮೆಯೊಂದೆ ಪರಿಹಾರವಲ್ಲ

satish jarakiholi
Published on

ಚಿತ್ರದುರ್ಗ: ಬಾಣಂತಿಯರ ಸಾವು ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಹೀಗಿದ್ದರೂ ವಿಪಕ್ಷಗಳು ಆರೋಗ್ಯ ಸಚಿವರ ರಾಜೀನಾಮೆ ಕೇಳುವುದರಲ್ಲಿ ಅರ್ಥವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶಾದ್ಯಂತ 30ಕ್ಕೂ ಹೆಚ್ಚು ರೈಲು ಅಪಘಾತ ಸಂಭವಿಸಿ, ದುರಂತವಾಗಿದೆ. ಅದಕ್ಕೆ ಪ್ರಧಾನಿ ನರೇಂದ್ರಮೋದಿ ಅವರನ್ನು, ಕೇಂದ್ರದ ರೈಲ್ವೆ ಸಚಿವರನ್ನು ರಾಜೀನಾಮೆ ಕೇಳಿದರೆ ಏನು ಪ್ರಯೋಜನ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆ ಹೊರತು ರಾಜೀನಾಮೆ ಎಂದಿಗೂ ಪರಿಹಾರವಲ್ಲ ಎಂದರು.

ಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ ನಡೆಯುತ್ತಿರುವ ಚರ್ಚೆಗೂ ನನಗೂ ಸಂಬಂಧವಿಲ್ಲ. ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. 2028ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಅವಕಾಶ ಸಿಕ್ಕರೆ ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.

ತಪ್ಪು ಯಾರಿಂದಲೇ ಆದರೂ ತನಿಖೆ ನಡೆದು, ಸಾಬೀತಾದರೆ, ಶಿಕ್ಷೆ ಅನುಭವಿಸಬೇಕು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net