ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ

28ydg02
Published on

ಯಾದಗಿರಿ: ಜೀವನದ ಸಂಧ್ಯಾಕಾಲದಲ್ಲಿ ಮತಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾವಿಟ್ಟು ಗೆಲ್ಲಿಸಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ತಿಳಿಸಿದರು.

ಸೋಮವಾರ ನಗರದ ಲಾಲ್ ಬಹದೂರ್ ಶಾಸ್ತ್ರೀ ವೃತ್ತದಲ್ಲಿನ ಜಿಲ್ಲಾಕಾರಿಗಳ ಹಳೇ ವಸತಿ ಗೃಹದಲ್ಲಿ ಆರಂಭಿಸಲಾದ ಶಾಸಕರ ನೂತನ ಜನಸಂಪರ್ಕ ಕಚೇರಿ ಉದ್ಘಾಟಿಸಿ ಮಾತನಾಡಿ, ಚುನಾವಣೆಯಲ್ಲಿ ನಾನು ಗೆದ್ದ ತಕ್ಷಣ ಶಾಸಕರ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಸಂಬಂಸಿದ ಅಕಾರಿಗಳೊಡನೆ ತೆರಳಿ ಜನರ ಸಮಸ್ಯೆಗಳಿಗೆ ಕಿವಿಯಾಗುತ್ತಿದ್ದೇನೆ. ಕ್ಷೇತ್ರದ ಪ್ರತಿ ಹಳ್ಳಿ, ತಾಂಡಾದಲ್ಲಿನ ಸಮಸ್ಯೆ ಪರಿಹರಿಸಿ ಮೂಲಸೌಲಭ್ಯ ಕಲ್ಪಿಸಲು ಬದ್ಧನಿದ್ದೇನೆ ಎಂದರು.

ನಮ್ಮದು ನುಡಿದಂತೆ ನಡೆಯುವ ಸರಕಾರ ಚುನಾವಣೆ ಪೂರ್ವದಲ್ಲಿ ನಾಡಿನ ಜನತೆಗೆ ಕೊಟ್ಟ ಐದು ಗ್ಯಾರಂಟಿಗಳನ್ನು ಈಡೇರಿಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಯಾದಗಿರಿಯನ್ನು ಮಾದರಿಯನ್ನಾಗಿ ಮಾಡುವುದು ಜಿಲ್ಲೆಯ 4 ಶಾಸಕರ ಕನಸಾಗಿದೆ ಎಂದು ತಿಳಿಸಿದರು.

ಜನರ ಸಮಸ್ಯೆ ಆಲಿಸಲೆಂದು ಜನಸಂಪರ್ಕ ಕಚೇರಿ ಆರಂಭಿಸಿದ್ದೇನೆ. ನಿಮ್ಮ ಯಾವುದೇ ತೊಂದರೆ ಇದ್ದರೂ ನೇರವಾಗಿ ನನ್ನನ್ನು ಬಂದು ಸಂಪಕರ್ಿಸಬಹುದು ಎಂದರು.

ಜಿಪಂ ಮಾಜಿ ಸದಸ್ಯ ಶ್ರೀನಿವಾಸರಡ್ಡಿ ಚನ್ನೂರು, ಪ್ರಮುಖರಾದ ಬಸ್ಸುಗೌಡ ಬಿಳ್ಹಾರ, ವೆಂಕಟರಡ್ಡಿ ವನಿಕೇರಿ, ಅಮರೇಶ ಜಾಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net