ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ವಿದ್ಯಾನಗರದ ಬಡವಾಣೆಯ ನಿವಾಸಿಗಳು ಮನವಿ

ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ವಿದ್ಯಾನಗರದ ಬಡವಾಣೆಯ ನಿವಾಸಿಗಳು ಮನವಿ
Published on

ಹಾಸನ: ವಿದ್ಯಾನಗರದ ಬಡವಾಣೆಯ ನಿವಾಸಿಗಳು ನಗರಸಭೆಯಿಂದ ಇ-ಖಾತೆ ಹಾಗೂ ಮೂಲಸೌಕರ್ಯದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಶಾಸಕ ಎಚ್.ಪಿ. ಸ್ವರೂಪ್‌ಪ್ರಕಾಶ ಅವರನ್ನು ಜಿಲ್ಲಾ ಆರೋಗ್ಯ ಇಲಾಖೆ ಕಛೇರಿಯಲ್ಲಿ ಸೋಮವಾರ ನಿವಾಸಿಗಳು ಮನವಿ ಮಾಡಿದರು
ವಿದ್ಯಾನಗರದ ನಿವಾಸಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಸುಮಂತ್ ಮಾತನಾಡಿ, ಶಾಸಕರು ಶೀಘ್ರದಲೇ ವಿದ್ಯಾನಗರದ ಬಡವಾಣೆಗೆ ಆಗಮಿಸಿ ನಿವಾಸಿಗಳ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗೃಹ ಮಂಡಳಿ ಸಂಘ ಮತ್ತು ಹಿರಿಯ ನಾಗರೀಕರು ಎಲ್ಲಾರು ಸೇರಿ ಶಾಸಕರನ್ನು ಭೇಟಿಯಾಗಿದ್ದು, ಈ ವೇಳೆ ವಿದ್ಯಾನಗರದ ಸಮಸ್ಯೆ ಕುರಿತು ಚರ್ಚೆ ಮಾಡಲಾಗಿದೆ. ನಗರಸಭೆ ಆಯುಕ್ತರ ಜೊತೆ ನಿವಾಸಿಗಳ ಸಮಸ್ಯೆ ಬಗ್ಗೆ ಸ್ಥಳದಲ್ಲೆ ಚರ್ಚೆ ಮಾಡುವುದಾಗಿ ಸಮಯ ಕೇಳಿದ್ದಾರೆ. ವಿದ್ಯಾನಗರದಲ್ಲಿ ಇ-ಖಾತಾ ಹಾಗೂ ಮೂಲಸೌಕರ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಶೀಘ್ರದಲ್ಲೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಇದೆ ಸಂದರ್ಭದಲ್ಲಿ ವಿದ್ಯಾನಗರದ ನಿವಾಸಿಗಳಾದ ಧರ್ಮಣ್ಣ, ಚಂದ್ರೇಗೌಡ, ಪುಟ್ಟಸ್ವಾಮಿಗೌಡ, ಮಂಜೇಗೌಡ, ಸಂಜೀವೇಗೌಡ ಸೇರಿದಂತೆ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net