ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ

19,kkr1(7-23
Published on

ಕಿಕ್ಕೇರಿ: ಗ್ರಾಮದ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಗ್ರಾಪಂ ಅಧ್ಯಕ್ಷ ಎಲ್.ಜೆ. ಅಶೋಕ್‌ಕುಮಾರ್ ಹೇಳಿದರು.
ಲಕ್ಷ್ಮೀಪುರ ಗ್ರಾಪಂ ಸಿಬ್ಬಂದಿಗೆ ಬುಧವಾರ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ನಿಗವಹಿಸಿ. ಒಳಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯಲು ಕ್ರಮವಹಿಸಿ. ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ವರ್ತಿಸಿ ಎಂದು ಸಿಬ್ಬಂದಿಗೆ ತಿಳಿಸಿದರು.
ಲಕ್ಷ್ಮೀಪುರ ಗ್ರಾಮದಲ್ಲಿರುವ ಓವರ್‌ಹೆಡ್ ಟ್ಯಾಂಕ್ ಶಿಥಿಲವಾಗಿದೆ. ಹಾಗಾಗಿ ಕುಡಿಯುವ ನೀರಿನ ಸಂಗ್ರಹಣೆ ಇಲ್ಲವಾಗಿದೆ. ಇರುವ 9ಕೊಳವೆ ಬಾವಿಗಳಿಂದ ನೇರವಾಗಿ ಗ್ರಾಮಕ್ಕೆ ಬೆಳಗ್ಗೆ, ಸಂಜೆ ನೀರು ಸರಬರಾಜು ಮಾಡಲಾಗುತ್ತಿದೆ. ಹಾಗಾಗಿ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಕಾಡದಂತೆ ಗಮನ ಹರಿಸಿ ಎಂದರು.
ಗ್ರಾಪಂ ಸದಸ್ಯ ರಾಜಶೇಖರ ಮೂರ್ತಿ, ಪಿಡಿಒ ಸುರೇಶ್‌ಬಾಬು, ಕಾರ್ಯದರ್ಶಿ ಯೋಗೇಶ್, ಬಿಲ್ ಕಲೆಕ್ಟರ್‌ಗಳಾದ ಶ್ರೀಧರ, ರವಿಚಂದ್ರನ್ ನೀರುಗಂಟಿಗಳಾದ ಕಾಳೇಗೌಡ, ವೆಂಕಟೇಶ್, ಗವಿಗೌಡ, ರಮೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net