

ಯಾದಗಿರಿ: ದಿನನಿತ್ಯದ ಬದುಕಿನಲ್ಲಿ ಎದುರಾಗುವ ಸಮಸ್ಯೆ ಹಾಗೂ ಸವಾಲುಗಳಿಗೆ ಬೆನ್ನು ಮಾಡದೇ, ಅವುಗಳನ್ನು ಸಮರ್ಥವಾಗಿ ಎದುರಿಸುವ ಛಲಗಾರಿಕೆ ಬೆಳಸಿಕೊಳ್ಳಬೇಕು ಎಂದು ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಭಾಶಚಂದ್ರ ಕೌಲಗಿ ಹೇಳಿದರು.
ಮಹಾವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡ ಸಮಾಜಕಾರ್ಯ ಗ್ರಾಮೀಣ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡುವ ಮೂಲಕ ಈ ನೆಲದ ಋಣ ತೀರಿಸುವ ಕೆಲಸ ಮಾಡಬೇಕು. ನಮ್ಮ ಕೆಲಸ ಮತ್ತು ಸಾಧನೆ ಇತರರ ಬಾಳು ಬೆಳಗುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ವ್ಯಕ್ತಿ ಸಾಧನೆಯ ಹಾದಿ ಹಿಡಿದಾಗ ದಾರಿಯಲ್ಲಿ ಸಮಸ್ಯೆ ಸವಾಲುಗಳೆಂಬ ಕಲ್ಲು ಮುಳ್ಳುಗಳು ಬರುವುದು ಸಹಜ. ಅವುಗಳಿಂದಾಗಿ ನಿರುತ್ಸಾಹದಿಂದ ಕುಗ್ಗಿ ಹೋಗದೇ, ಅವುಗಳಿಗೆ ಬದಿಗೆ ಸರಿಸಿ ಮುನ್ನಡೆದವನು ಮಾತ್ರ ಸಾಧನೆಯ ಶಿಖರ ತಲುಪಲು ಸಾಧ್ಯ ಎಂದರು.
ಮುಖ್ಯ ಅತಿಥಿ ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥ ಡಾ.ಹಳಿಮನಿ ದೇವಿಂದ್ರಪ್ಪ ಮಾತನಾಡಿ, ಭಾರತ ವೈವಿದ್ಯತೆಗಳ ಆಗರ. ಇಲ್ಲಿನ ಜನರ ಜೀವನಶೈಲಿ, ಸಂಸ್ಕೃತಿ, ಪರಂಪರೆ ಒಂದಕ್ಕಿAತ ಒಂದು ಭಿನ್ನವಾಗಿವೆ. ಇಂತಹ ಸಮಾಜದ ನೈಜ ದರ್ಶನವಾಗಬೇಕಾದರೆ ಗ್ರಾಮೀಣ ಶಿಬಿರಗಳು ಅತ್ಯಂತ ಅವಶ್ಯಕ. ಶಿಬಿರಗಳಿಂದಾಗಿ ಸಮಾಜದೊಂದಿಗೆ ಬೆರೆಯಲು, ಅವರ ಸಮಸ್ಯೆಗಳ ಬಗ್ಗೆ ತಿಳಿಯಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಅಧ್ಯP್ಷÀತೆ ವಹಿಸಿದ್ದ ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಉಮೇಶ ತೇಜಪ್ಪ ಮಾತನಾಡಿ, ಸಮಾಜ ಕಾರ್ಯಕರ್ತರ ವ್ಯಕ್ತಿತ್ವ ವಿಕಾಸಕ್ಕೆ, ಜನಸಮುದಾಯದ ಸಮಸ್ಯೆಗಳ ಅಧ್ಯಯನಕ್ಕೆ ಸಮಾಜಕಾರ್ಯ ಶಿಬಿರ ಪೂರಕವಾಗಿದ್ದು, ಅದರ ಸದ್ಬಳಕೆ ಮಾಡಿಕೊಳ್ಳಿ ಎಂದು ಅವರು ಹೇಳಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಲಿಂಗರಾಜ ಸಿನ್ನೂರ, ಸಾಹೇಬರೆಡ್ಡಿ ಬಂಗಾರಿ, ಡಾ.ಸಿದ್ದರಾಜರೆಡ್ಡಿ ಇತರರಿದ್ದರು.
ಭಾಗ್ಯಲಕ್ಷ್ಮೀ ಪ್ರಾರ್ಥಿಸಿದರು. ವೀರೇಶ ಕುಂಚೆಟ್ಟಿ ಸ್ವಾಗತಿಸಿದರು. ರಾಚಪ್ಪ ವಂದಿಸಿದರು. ಪಾಂಡುರAಗ ನಿರೂಪಿಸಿದರು.