ಸಮಷ್ಟಿ ಭಾವನೆಯಿಂದ ಏಳಿಗೆ ಸಾಧ್ಯ

web3
ಮೂಡಲಗಿ ಪಟ್ಟಣದ ಬಸವೇಶ್ವರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಗಳನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಎಸ್.ಜಿ.ಢವಳೇಶ್ವರ, ನವೀನ ಬಡಗಣ್ಣವರ, ರುದ್ರಪ್ಪ ವಾಲಿ, ಬಸವರಾಜ ತೇಲಿ, ಗಿರೀಶ ಢವಳೇಶ್ವರ ಇತರರಿದ್ದರು.
Published on

ಮೂಡಲಗಿ: ಮನುಷ್ಯ ತನ್ನ ಬದುಕಿನಲ್ಲಿ ಆರ್ಥಿಕತೆ ಜತೆಗೆ ಸಮಾಜದ ಸಾರ್ಥಕ್ಯ ಕಾಣಬೇಕು ಎಂದು ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಬಸವೇಶ್ವರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಬೆಳ್ಳಿ ಮಹೋತ್ಸವ ನೆನಪಿಗಾಗಿ ನಿರ್ಮಿಸಿರುವ ಅತಿಥಿ ಗೃಹ ಮತ್ತು ವಾಹನ ನಿಲುಗಡೆ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ತಾನು ಬೆಳೆಯುವುದರೊಂದಿಗೆ ಎಲ್ಲರನ್ನೂ ಬೆಳೆಸಬೇಕು. ಸಮಷ್ಟಿ ಭಾವನೆ ಇದ್ದರೆ ಏಳಿಗೆ ಸಾಧ್ಯ ಎಂದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಕಾಯಕ ಮತ್ತು ದಾಸೋಹದ ಮೂಲಕ ಆರ್ಥಿಕತೆ ಮತ್ತು ಸಾರ್ಥಕ್ಯ ಪ್ರತಿಪಾದಿಸಿದ್ದರು. ಕ್ಷಣಿಕವಾದ ಬದುಕಿನಲ್ಲಿ ಸಮಾಜಕ್ಕೆ ಒಳಿತು ಮಾಡುವ ಮೂಲಕ ಬದುಕು ಸುಂದರವಾಗಿಸಿಕೊಳ್ಳಬೇಕು. ಮೂಡಲಗಿಯ ಬಸವೇಶ್ವರ ಸೊಸೈಟಿಯು ಆರ್ಥಿಕತೆಯ ಜತೆಗೆ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದೆ. ಇದು ಶ್ಲಾಘನೀಯ ಎಂದರು.

ಸೊಸೈಟಿ ಆಡಳಿತ ಮಂಡಳಿ ವತಿಯಿಂದ ಶ್ರೀಗಳನ್ನು ಸನ್ಮಾನಿಸಿದರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ.ಢವಳೇಶ್ವರ, ಮೂಡಲಗಿ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ನವೀನ ಬಡಗಣ್ಣವರ, ನಿರ್ದೇಶಕ ರುದ್ರಪ್ಪ ವಾಲಿ, ಸೊಸೈಟಿ ಅಧ್ಯಕ್ಷ ಬಸವರಾಜ ತೇಲಿ, ಉಪಾಧ್ಯಕ್ಷ ಗಿರೀಶ ಢವಳೇಶ್ವರ, ನಿರ್ದೇಶಕರಾದ ಚನ್ನಬಸು ಬಡ್ಡಿ, ಶ್ರೀಕಾಂತ ಹಿರೇಮಠ, ರವೀಂದ್ರ ಭಾಗೋಜಿ, ಶ್ರೀಶೈಲ ಮದಗನ್ನವರ, ಮಲ್ಲಿಕಾರ್ಜನು ಢವಳೇಶ್ವರ, ರೇವಪ್ಪ ಕೌಜಲಗಿ, ಕುಸುಮಾ ತೇಲಿ, ಸುಮಿತ್ರಾ ಶೇಡಬಾಳ, ಮಹಾದೇವಿ ಹಿರೇಮಠ, ಲಕ್ಷ್ಮಣ ತೆಳಗಡೆ, ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net