ಸಮರ್ಪಕ ವಿದ್ಯುತ್ ಪೂರೈಸಿ

23 KAMPLI 03
Published on

ಕಂಪ್ಲಿ: ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ ಜೆಸ್ಕಾಂ ಎಇ ವಿನೋದ್ ಬ್ಯಾಲಾಳ್‌ಗೆ ಪಟ್ಟಣದ ಗಂಗಾನಗರ ನಿವಾಸಿಗಳು ಬುಧವಾರ ಮನವಿ ಸಲ್ಲಿಸಿದರು.

ನಿವಾಸಿ ನಡವಿ ಮಲ್ಲಿಕಾರ್ಜುನ ಮಾತನಾಡಿ, ಕಳೆದ ಕೆಲ ದಿನಗಳಿಂದ ಗಂಗಾನಗರದ ಮನೆಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಬೆಳಗ್ಗೆ 6 ಗಂಟೆಗೆ ವಿದ್ಯುತ್ ಕಡಿತಗೊಂಡರೆ ಮಧ್ಯಾಹ್ನ 1 ಗಂಟೆಗೆ ಬರುತ್ತದೆ. ಆ ಬಳಿಕ ಮತ್ತೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ. ರಾತ್ರಿಯಿಡೀ ವಿದ್ಯುತ್ ಇರುವುದಿಲ್ಲ. ವಿದ್ಯುತ್ ಕಡಿತಗೊಂಡಾಗಲೆಲ್ಲ ದೂರವಾಣಿ ಮೂಲಕ ದೂರು ನೀಡಿದ್ರೂ ಕ್ರಮ ವಹಿಸಿಲ್ಲ ಎಂದು ದೂರಿದರು.

ಎಇ ವಿನೋದ್ ಬ್ಯಾಲಾಳ್ ಪ್ರತಿಕ್ರಿಯಿಸಿ, ತಾಂತ್ರಿಕ ಕಾರಣಗಳಿಂದ ಸಮಸ್ಯೆಯಾಗಿದ್ದು, ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು. ನಿವಾಸಿಗಳಾದ ಮಳೆಕಾರ ಭರತ್ ಕುಮಾರ್, ಉಡೇಗೋಳ್ ವಿರುಪಣ್ಣ, ಬಿ.ಮಲ್ಲಿಕಾರ್ಜುನ, ಇಟಗಿ ಈರಣ್ಣ, ಮಹಮ್ಮದ್, ಟಿ.ಪ್ರದೀಪ್, ರಾಜಾ, ರಾಮು, ತಳವಾರ ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net