ಸಮರ್ಪಕ ವಿದ್ಯುತ್ ಪೂರೈಸಿ

16Athanigrameen1
Published on

ಅಥಣಿ ಗ್ರಾಮೀಣ: ತಾಲೂಕಿನ ಕೆಲ ಗ್ರಾಮಗಳಲ್ಲಿ ೫೦ ವರ್ಷಗಳ ಹಿಂದೆ ಅಳವಡಿಸಿದ್ದ ವಿದ್ಯುತ್ ತಂತಿ ಜೋಡಣೆ ಇರುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ. ರೈತರು ಇಂತಹ ಹಳೆಯ ವಿದ್ಯುತ್ ತಂತಿ ತೆಗೆದು ಹೊಸ ತಂತಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಲಕ್ಶ್ಮಣ ಸವದಿ ಹೇಳಿದರು.

ಅಥಣಿ ಗೃಹ ಕಚೇರಿಯಲ್ಲಿ ಈಚೆಗೆ ವಿದ್ಯುತ್ ಅವಘಡದಲ್ಲಿ ಮೃತಪಟ್ಟವರ ವಾರಸುದಾರರಿಗೆ ಹೆಸ್ಕಾಂ ಇಲಾಖೆ ವತಿಯಿಂದ ಶುಕ್ರವಾರ ಪರಿಹಾರ ಚೆಕ್ ವಿತರಿಸಿ ಮಾತನಾಡಿ, ರೈತರಿಗೆ ಸಮರ್ಪಕ ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೆಸ್ಕಾಂ ಅಧಿಕಾರಿಗೆ ಸೂಚನೆ ನೀಡಿದರು. ತಾಲೂಕಿನ ಅಡಹಳ್ಳಿ ಗ್ರಾಮದ ರೈತ ಶ್ರೀಶೈಲ ಕೋಹಳ್ಳಿ, ಶೇಗುಣಸಿ ಗ್ರಾಮದ ಶ್ರೀಕಾಂತ ಠಕ್ಕಣ್ಣವರ ಅವರ ವಾರಸುದಾರರಿಗೆ ತಲಾ ೫ ಲಕ್ಷ ರೂ. ಚೆಕ್ ವಿತರಿಸಿದರು.

ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತ ಜಿ.ವಿ. ಸಂಪನ್ನವರ, ಎಒ ಬಿ.ಜಿ.ಸನದಿ, ಐಗಳಿ ಹೆಸ್ಕಾಂ ಅಽಕಾರಿ ಎಂ.ಎಂ. ಯಳವಾರ, ದರೂರ ಸೆಕ್ಷನ್ ಆಫೀಸರ್ ಮಹಾವೀರ ಅವಟಿ, ರಾವಸಾಹೇಬ ಬಳ್ಳೋಳ್ಳಿ, ಜಿ.ಆರ್. ಗುಣಕಿ, ಗ್ರಾಪಂ ಮಾಜಿ ಅಧ್ಯಕ್ಷ ಈರಗೌಡ ಪಾಟೀಲ, ಸುಭಾಷ ಕೋಹಳ್ಳಿ, ಅರುಣ ಕೋಹಳ್ಳಿ, ಪ್ರಕಾಶ ಪೂಜಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net