

ಯರಗಟ್ಟಿ: ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಯರಗಟ್ಟಿ, ರೈನಾಪುರ, ಆಲದಕಟ್ಟಿ, ಬೂದಿಗೊಪ್ಪ ಹಾಗೂ ಸುತ್ತಲಿನ ಗ್ರಾಮಗಳ ರೈತರು ಗುರುವಾರ ಯರಗಟ್ಟಿ ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ, ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ಸಕಾಲಕ್ಕೆ ಮಳೆ ಬಾರದ್ದರಿಂದ ಬೆಳೆಗಳು ಒಣಗುತ್ತಿವೆ. ಇರುವ ಅಲ್ಪ ಬೆಳೆ ಬದುಕಿಸಲು ನೀರು ಸಾಕಾಗುತ್ತಿಲ್ಲ. ಅದಕ್ಕಾಗಿ ಹೆಚ್ಚಿನ ಕಾಲಾವಧಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಎಇಇ ಮಹೇಂದ್ರ ವಿಶಾಲಪೂರಕರ್ ಮಾತನಾಡಿ, ಸದ್ಯ ಸಿಂಗಲ್ ೇಸ್‌ನಲ್ಲಿ ವಿದ್ಯುತ್ ಒದಗಿಸಲು ಸಾಧ್ಯವಿಲ್ಲ. ರಾತ್ರಿ ವೇಳೆ ನೀಡಲಾಗುತ್ತಿದ್ದ ವಿದ್ಯುತ್‌ನ್ನು ಸಮಯ ಬದಲಾಯಿಸಿ 7 ಗಂಟೆ ತ್ರಿೇಸ್ ವಿದ್ಯುತ್ ಪೂರೈಸಲಾಗುವುದು ಎಂದು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆಯಿಂದ ಹಿಂದೆ ಸರಿದರು.
ವೆಂಕಟೇಶ ಪಾಟೀಲ, ಗಿರೀಶ ಪಾಟೀಲ, ಗೋವಿಂದ ದೇವರಡ್ಡಿ, ಗಿರೀಶ ದೇವರಡ್ಡಿ,ಸಂತೋಷ ದೇವರಡ್ಡಿ, ವೆಂಕಟೇಶ ವಜ್ರಮಟ್ಟಿ, ಮಲ್ಲಿಕಾರ್ಜುನ ವಜ್ರಮಟ್ಟಿ, ಕೀರಪ್ಪ ಕಾಮನ್ನವರ, ಕೃಷ್ಣಪ್ಪ ಮಿಕಲಿ, ಮಲ್ಲಿಕಾರ್ಜುನ ಮಠಪತಿ, ಮೌನೇಶ ಹಳ್ಳಂಡಿ, ರಮೇಶ ಕರಿಗನ್ನವರ ಇದ್ದರು.