ಸಮರ್ಪಕ ಪಡಿತರ ವಿತರಣೆಗೆ ಆಗ್ರಹ

Demand for distribution of adequate rations
ಸಮರ್ಪಕವಾಗಿ ಪಡಿತರ ವಿತರಿಸಬೇಕು ಎಂದು ಆಗ್ರಹಿಸಿ ಆಲಮಟ್ಟಿಯಲ್ಲಿನ ನ್ಯಾಯಬೆಲೆ ಅಂಗಡಿ ಮುಂದೆ ನಾಗರಿಕರು ಪ್ರತಿಭಟನೆ ನಡೆಸಿದರು. ಸುಮಿತ್ರಾ ಮನಗೂಳಿ, ರೇಷ್ಮಾ ಬಾರಕೇರ, ಪ್ರೀತಿ ಹೊನಕೇರಿ, ಶಾರದಾ ಚವ್ಹಾಣ ಇತರರಿದ್ದರು.
Published on

ಆಲಮಟ್ಟಿ: ಇಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಸಮರ್ಪಕವಾಗಿ ಪಡಿತರ ವಿತರಿಸುತ್ತಿಲ್ಲ ಎಂದು ಆಗ್ರಹಿಸಿ ಶುಕ್ರವಾರ ನಾಗರಿಕರು ಕೆಲಕಾಲ ಪ್ರತಿಭಟನೆ ನಡೆಸಿದರು.

ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿ ಸುಮಿತ್ರಾ ಮನಗೂಳಿ ಮಾತನಾಡಿ, ಕಳೆದ 2ವರ್ಷಗಳಿಂದ ಸರಿಯಾಗಿ ಪಡಿತರ ವಿತರಣೆ ಮಾಡದೇ ಇರುವದರಿಂದ ನಾಗರಿಕರಿಗೆ ತೊಂದರೆಯಾಗಿದೆ. ಕೂಡಲೇ ಇದನ್ನು ಸರಿಪಡಿಸಬೇಕು. ಇಂದು ಆಹಾರ ಇಲಾಖೆಯ ವತಿಯಿಂದ ಪಡಿತರ ವಿತರಣೆಗೆ ಮುಂದಾಗಿರುವುದು ಒಳ್ಳೆಯ ವಿಚಾರವಾದರೂ ಹಿಂದಿನ 2-3 ತಿಂಗಳಿನಿಂದ ಕೆಲ ಪಡಿತರದಾರರಿಗೆ ಪಡಿತರ ವಿತರಿಸಿಲ್ಲ. ಅದನ್ನು ವಿತರಿಸಬೇಕು ಎಂದು ಆಗ್ರಹಿಸಿದರು.

ಆಹಾರ ನಿರೀಕ್ಷಕ ಎಂ.ಬಿ. ಹೊಟಗಾರ, ಈ ಹಿಂದೆ ಈ ನ್ಯಾಯಬೆಲೆ ಅಂಗಡಿಯ ಬಗ್ಗೆ ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಇಂದು ಇಲಾಖೆ ವತಿಯಿಂದ ವಿತರಣೆಗೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಕೆಲ ಜನರಿಗೆ ಬಯೋಮೆಟ್ರಿಕ್ ಪಡೆದು ಪಡಿತರ ನೀಡಿಲ್ಲವೆಂದು ಹೇಳುತ್ತಿದ್ದು, ಹಿಂದಿನ ಪಡಿತರ ನೀಡಿ ಈ ತಿಂಗಳಿನ ಪಡಿತರ ವಿತರಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದೀರಿ. ಈ ಕುರಿತು ತಹಸೀಲ್ದಾರ್ ಜತೆಗೆ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಇದರಿಂದ ಪ್ರತಿಭಟನೆಯನ್ನು ನಾಗರಿಕರು ಕೈಬಿಟ್ಟರು. ಕರವೇ ಆಲಮಟ್ಟಿ ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮಾ ಬಾರಕೇರ, ಉಪಾಧ್ಯಕ್ಷೆ ಪ್ರೀತಿ ಹೊನಕೇರಿ, ಶಾರದಾ ಚವ್ಹಾಣ, ಯಲಗೂರೇಶ ಗಂಟಿ, ಹುಲಿಗೆಪ್ಪ ಮುಗ್ಗೋಳ, ಲಕ್ಷ್ಮಿ ಲಮಾಣಿ, ಗುಬ್ಬಿಬಾಯಿ ಲಮಾಣಿ, ಲಕ್ಷ್ಮಿ ಹೊನಕಟ್ಟಿ, ಗಂಗವ್ವ ಚಿಮ್ಮಲಗಿ, ಗ್ರಾಪಂ ಮಾಜಿ ಅಧ್ಯಕ್ಷೆ ಸೈದಮ್ಮ ಬೆಣ್ಣಿ, ಚವಳಾಬಾಯಿ ಲಮಾಣಿ ಇತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net