ಸಮರ್ಥ ಭಾರತ ಕಟ್ಟುವ ಸಂಕಲ್ಪಮಾಡಿ

Oplus_131072
 ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಿಂದ ಶನಿವಾರ ಆಯೋಜಿಸಿದ್ದ ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಡಾ.ಬಸವರಾಜ ಸ್ವಾಮಿ, ಬಿ.ಕೆ. ಹಿರೇಮಠ, ಸಿದ್ರಾಮಪ್ಪ ಗುದಗೆ, ಸೂರ್ಯಕಾಂತ ಮಠ, ಪಿ.ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ, ವಿಜಯಕುಮಾರ ಸಂಗೋಳಗೆ, ಐ.ಜಿ. ಮಠಪತಿ, ಅಲ್ಲಮ ಪ್ರಭು ಹಿರೇಮಠ, ಪಂಡಿತರಾವ ದೇಗಾಂವ, ಶಿವಶರಣ ಚೌದರಿ, ಕಾಶಪ್ಪ ದೇಗಾಂವ ಇದ್ದರು.
Published on

ಬಸವಕಲ್ಯಾಣ: ಮನಸ್ಸು, ಶರೀರ ಮತ್ತು ಸಾಮಾಜಿಕ ಬದುಕಿನ ಸ್ವಾಸ್ಥ್ಯಕ್ಕಾಗಿ ಯೋಗಾಭ್ಯಾಸ ಅದ್ಭುತ ಸಾಧನವಾಗಿದೆ. ಚಾರಿತ್ರ್ಯಶುದ್ದಿಯ ಪ್ರಧಾನ ಅಂಗವೂ ಆಗಿದೆ. ದೇಹಬಲ ಹಾಗೂ ನೈತಿಕ ಬಲ ಸೊರಗದಂತೆ ಯೋಗ ಕಾಪಾಡುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಹಾರಕೂಡ ಶ್ರೀಮಠದ ಶ್ರೀ ಚನ್ನರೇಣುಕ ಬಸವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಕ್ರಮಬದ್ಧ, ನಿರಂತರವಾದ ಯೋಗ ಸಾಧನೆಯಿಂದ ಮನುಷ್ಯ ತನ್ನಾತ್ಮದ ಉತ್ಖನನ ಪ್ರಕ್ರಿಯೆಯಲ್ಲಿ ತೊಡಗಿ ಪ್ರಜ್ಞೆಯ ಬೆಳಕಿನಲ್ಲಿ ಬದುಕಿನ ನೈಜ ಧ್ಯೇಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ವೈಯಕ್ತಿಕ ಆರೋಗ್ಯದಿಂದ ವಿಶ್ವದ ಆರೋಗ್ಯ ಸಾಧಿಸುವ ಶುಭದೃಷ್ಟಿ ಹೊಂದಿರುವುದು ಇಂದಿನ ತುರ್ತು ಅಗತ್ಯವಾಗಿದೆ. ೧೧ನೇ ವಿಶ್ವ ಯೋಗ ದಿನಾಚರಣೆ ಸದೃಢ ಹಾಗೂ ಸಮರ್ಥ ಭಾರತ ಕಟ್ಟುವ ಸಂಕಲ್ಪದ ದಿನವಾಗಲಿ, ನಮ್ಮ ರಾಷ್ಟ್ರದ ಅಂತಃಶಕ್ತಿ ವಿಶ್ವದ ಮುನ್ನಡೆಗೆ ಪ್ರೇರಣೆಯಾಗಲಿ ಎಂಬುವುದೇ ನಮ್ಮ ಮಹದಾಸೆಯಾಗಿದೆ ಎಂದು ನುಡಿದರು.

ಯೋಗ ಗುರು ಡಾ. ಬಸವರಾಜ ಸ್ವಾಮಿ ತ್ರಿಪುರಾಂತ ಯೋಗ ಮತ್ತು ಆರೋಗ್ಯದ ಮಾಹಿತಿ ನೀಡಿದರು.

ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಪಿ.ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ, ವಿಜಯಕುಮಾರ ಸಂಗೋಳಗೆ, ಸೂರ್ಯಕಾಂತ ಮಠ, ಐ.ಜಿ. ಮಠಪತಿ, ಅಲ್ಲಮ ಪ್ರಭು ಹಿರೇಮಠ, ಪಂಡಿತರಾವ ದೇಗಾಂವ, ಶಿವಶರಣ ಚೌದರಿ, ಕಾಶಪ್ಪ ದೇಗಾಂವ ಇದ್ದರು.

ಅಂಬರಾಯ ಉಗಾಜಿ ನಿರೂಪಣೆ ಮಾಡಿದರು. ನವಲಿಂಗ ಪಾಟೀಲ ವಂದಿಸಿದರು. ಶ್ರದ್ಧಾ ಪಾಟೀಲ ಯೋಗಾಸನ ಪ್ರದರ್ಶನ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು. ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆ ಮಕ್ಕಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net