

ಬೇಲೂರು: ಪ್ರಯಾಣಿಕರ ಸಮಯಪ್ರಜ್ಞೆಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ವಿದ್ಯಾರ್ಥಿಗಳು, ಪ್ರಯಾಣಿಕರು ದೊಡ್ಡ ಅಪಘಾತದಿಂದ ಪಾರಾಗಿದ್ದಾರೆ.
ಸಕಲೇಶಪುರದಿಂದ-ಸುಲಗಳಲೆಗೆ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ತಾಲೂಕಿನ ಬಿರಡಳ್ಳಿ ಗ್ರಾಮದ ಪ್ರಯಾಣಿಕರ ತಂಗುದಾಣದ ಬಳಿ ಬರುತ್ತಿದ್ದಂತೆ ಮುಂಭಾಗದ ಟೈರ್‌ಗೆ ಅಳವಡಿಸಿದ್ದ ಕಬ್ಬಿಣದ ಡಿಸ್ಕ್ ತುಂಡಾಗಿ ಬೀಳುವ ಹಂತಕ್ಕೆ ತಲುಪಿತ್ತು. ಇದನ್ನು ಗಮನಿಸಿದ ಪ್ರಯಾಣಿಕರು ತಕ್ಷಣವೇ ಚಾಲಕ ಮತ್ತು ನಿರ್ವಾಹಕರ ಗಮನಕ್ಕೆ ತಂದಿದ್ದಾರೆ.
ಎಚ್ಚೆತ್ತ ಚಾಲಕ ಬಸ್‌ನಲ್ಲಿದ್ದ ಪ್ರಯಾಣಿಕರನ್ನೆಲ್ಲ ಕೆಳಗಿಳಿಸಿ ಬಸ್ಸನ್ನು ಸ್ಥಳದಲ್ಲೇ ನಿಲ್ಲಿಸಿದ್ದರಿಂದ ಯಾವುದೇ ಅನಾಹುತಕ್ಕೂ ಆಸ್ಪದವಾಗಲಿಲ್ಲ. ಪ್ರಯಾಣಿಕರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.