

ಹುಣಸಗಿ (ಗ್ರಾಮೀಣ): ವಿದ್ಯಾರ್ಥಿಗಳು ವಿನಾಃ ಕಾರಣ ಸಮಯವನ್ನು ವ್ಯರ್ಥ ಮಾಡದೆ ಅದನ್ನು ಅದ್ಬಳಕೆ ಮಾಡಿಕೊಳ್ಳಬೆಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್ ಹೆಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಮಹಾ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದುಕೊಂಡ ಸಮಯ ಮತ್ತೆ ಸಿಗಲಾರದು. ಹೀಗಾಗಿ ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಈ ಹಂತದಲ್ಲಿ ವಿದ್ಯಾರ್ಥಿಗಳು ಅನಗತ್ಯ ವಿಷಯಗಳಿಗೆ ತಲೆ ಕೆಡಿಸಿಕೊಳ್ಳದೆ ಕೇವಲ ಓದು, ಧ್ಯಾನ ವ್ಯಾಯಾಮಗಳಂತ ವಿಷಯಗಳಿಗೆ ಮಾತ್ರ ಹೆಚ್ಚಿನ ಗಮನ ಹರಿಸಿದಾಗ ನೀವು ಇಟ್ಟುಕೊಂಡ ಗುರಿ ಮುಟ್ಟಲು ಸಾಧ್ಯ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಘವೇಂದ್ರ ಕಾಮನಟಗಿ ಮಾತನಾಡಿ, ಇಂದಿನ ಯುವ ಜನತೆ ಪತ್ರಿಕೆ ಮತ್ತು ಮೊಬೈಲ್‌ನಿಂದ ಕಾಲೇಜು ವಿದ್ಯಾರ್ಥಿಗಳು ಓದುವುದನ್ನು ಕಡಿಮೆ ಮಾಡಿದ್ದಾರೆ. ನಿತ್ಯ ಪತ್ರಿಕೆಗಳನ್ನು ಓದುವುದರಿಂದ ಗ್ರಾಮೀಣ, ರಾಜ್ಯ, ಅಂತಾರಾಜ್ಯ, ರಾಷ್ಟಿçÃಯ ಸುದ್ದಿಗಳ ಮಾಹಿತಿ ನಮಗೆ ತಿಳಿಯಲಿದೆ. ಇದರಿಂದ ನಮ್ಮ ಬುದ್ಧಿ ಮಟ್ಟವು ಸಹ ಹೆಚ್ಚಾಗುತ್ತದೆ ಎಂದು ಹೇಳಿದರು. ಶಿಕ್ಷಕಿ ನೀಲಮ್ಮ ನಾಗರಬೆಟ್ಟ ಮಾತನಾಡಿದರು. ಈ ವೇಳೆ ವಿವಿಧ ಸ್ಪರ್ಧೆ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಾಚಾರ್ಯ ಎಸ್.ಎಂ. ಕಿರಣಗಿ, ಬಸವರಾಜ ಮರೋಳ, ರವಿ ಬಂಟನೂರು, ಮಲ್ಲನಗೌಡ ಪಾಟೀಲ್, ಬಸವರಾಜ ಹುಣಸಗಿ, ಪ್ರಕಾಶ ಪಾಟೀಲ್, ಸೋಮನಾಥ, ಜಟ್ಟಪ್ಪ, ಮೌನೇಶ, ಪದ್ಮಾವತಿ ಇತರರಿದ್ದರು.
ತೇಜಸ್ವಿನಿ ಸ್ವಾಗತಿಸಿದರು. ರೇಣುಕಾ ವಂದಿಸಿದರು. ಹಣಮಂತ್ರಾಯ ನಿರೂಪಿಸಿದರು.