

ಚಿತ್ರದುರ್ಗ: ವಿಶ್ವಬಂಧು ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 2022-23ನೇ ಹಣಕಾಸು ಸಾಲಿನಲ್ಲಿ 36.35 ಲಕ್ಷ ರೂ.ಲಾಭದಲ್ಲಿದೆ ಎಂದು ಸೊಸೈಟಿ ಅಧ್ಯಕ್ಷ ಜಿ.ಬಿ.ತೀರ್ಥಪ್ಪ ಹೇಳಿದರು.
ನಗರದ ದಲ್ಲಾಲರ ಭವನದಲ್ಲಿ ಭಾನುವಾರ ನಡೆದ ಸೊಸೈಟಿ 32ನೇ ವಾರ್ಷಿಕ ಮಹಾಸಭೆ ಉದ್ಘಾಟಿಟಿಸಿ ಮಾತನಾಡಿದ ಅವರು, 45.35 ಲಕ್ಷ ರೂ.ಷೇರು ಬಂಡವಾಳ ಹಾಗೂ 1264 ಸದಸ್ಯರು ಇದ್ದಾರೆ. ಠೇವಣಿ ಮೊತ್ತ 3.94 ಕೋಟಿ ರೂ.ಇದೆ. 6.10 ಕೋಟಿ ರೂ.ಸಾಲ ನೀಡಲಾಗಿ ದ್ದು,ಸಾಲ ಪಡೆದವರು ಅಸಲು ಮತ್ತು ಬಡ್ಡಿಯನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ ಸೊಸೈಟಿ ಅಭಿವೃದ್ದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಜಾಮೀನುದಾರರ ಮೇಲೂ ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ಇದೆ ಎಂದರು.
ಸೊಸೈಟಿ ಉಪಾಧ್ಯಕ್ಷ ಟಿ.ನಾಗರಾಜ್(ನಂದಿ)ನಿರ್ದೇಶಕರಾದ ಎಚ್.ಎಂ.ದ್ಯಾಮಣ್ಣ ಕೋಗುಂಡೆ,ಜಿ.ಬಿ.ಶೇಖರಪ್ಪ,ಎಂ.ಸಿ.ಶೋಭಾ, ಎಚ್. ಎನ್.ಶಿವಪ್ರಸಾದ್,ಸಿ.ಮಹೇಶ್ವರಪ್ಪ,ದಿವಾಕರ್‌ಸಂಕೋಳ್, ಎಸ್.ಶೋಭಾವತಿ,ಜಿ.ಎನ್.ಶಿವಕುಮಾರ್,ಟಿ.ರುದ್ರಪ್ಪ,ಓಬಳೇಶಪ್ಪ ಇತರರು ಇದ್ದರು.
(ಸಿಟಿಡಿ 28 ವಿಶ್ವಬಂಧು)
ಚಿತ್ರದುರ್ಗದಲ್ಲಿ ಭಾನುವಾರ ವಿಶ್ವಬಂಧು ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆಯನ್ನು ಸೊಸೈಟಿ ಅಧ್ಯಕ್ಷ ಜಿ.ಬಿ.ತೀರ್ಥಪ್ಪ ಉದ್ಘಾಟಿಸಿದರು. ಟಿ.ನಾಗರಾಜ್(ನಂದಿ)ಎಚ್.ಎಂ.ದ್ಯಾಮಣ್ಣ ಕೋಗುಂಡೆ,ಜಿ.ಬಿ.ಶೇಖರಪ್ಪ,ಎಂ.ಸಿ.ಶೋಭಾ,ಎಚ್. ಎನ್.ಶಿವಪ್ರಸಾದ್,ಸಿ.ಮಹೇಶ್ವರಪ್ಪ,ದಿವಾಕರ್‌ಸಂಕೋಳ್,ಎಸ್.ಶೋಭಾವತಿ,ಜಿ.ಎನ್.ಶಿವಕುಮಾರ್,ಟಿ.ರುದ್ರಪ್ಪ,ಓಬಳೇಶಪ್ಪ ಮತ್ತಿತರರು ಇದ್ದರು.