

ಬೈಲಹೊಂಗಲ: ಸಮೀಪದ ಚಚಡಿ ಗ್ರಾಮದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ವೇಳೆಗೆ ಸರಿಯಾಗಿ ಸಮರ್ಪಕ ಬಸ್ ಓಡಿಸುವಂತೆ ಆಗ್ರಹಿಸಿ ಗ್ರಾಮದ ವಿದ್ಯಾರ್ಥಿಗಳು ಶಾಸಕ ಮಹಾಂತೇಶ ಕೌಜಲಗಿ ಹಾಗೂ ಘಟಕ ವ್ಯವಸ್ಥಾಪಕ ಬಿ.ಜಿ. ಹೊಸಮನಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ನೂರಕ್ಕೂ ಹೆಚ್ವು ವಿದ್ಯಾರ್ಥಿಗಳು ಶಾಸಕರ ನಿವಾಸಕ್ಕೆ ತೆರಳಿ ಸಮರ್ಪಕವಾಗಿ ಬಸ್ ಇಲ್ಲದೆ ತಮಗಾಗುತ್ತಿರುವ ಅನಾನುಕೂಲ ಕುರಿತು ಅಳಲು ತೋಡಿಕೊಂಡರು. ಬಸ್ ಸಮಸ್ಯೆ ನಿವಾರಿಸಿ ಎಂದು ಘಟಕ ವ್ಯವಸ್ಥಾಪಕರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಶಾಸಕರು ಹಾಗೂ ಘಟಕ ವ್ಯವಸ್ಥಾಪಕರು, ಸಂಚಾರ ನಿರೀಕ್ಷಕ ಬಿ.ಜಿ. ಪುಡಕಲಕಟ್ಟಿ ಅವರನ್ನು ನಿವಾಸಕ್ಕೆ ಕರೆಯಿಸಿಕೊಂಡು ತರಾಟೆ ತೆಗೆದುಕೊಂಡರು. ಕೂಡಲೇ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬಸ್ ಸೇವೆ ಒದಗಿಸುವಂತೆ ಸೂಚನೆ ನೀಡಿದರು.
ವಿದ್ಯಾರ್ಥಿಗಳಾದ ಪ್ರಜ್ವಲ ಸೊಗಲ, ಯಶವಂತ ಪೂಜೇರಿ, ಕುಮಾರ ಬಂಡಿವಡ್ಡರ, ಸುಶಾಂತ ಪಾಟೀಲ, ವಿಶ್ವನಾಥ ವನ್ನೂರ, ಸುಭಾನ ಶಿಲ್ಲೇದಾರ, ಸಾಗರ ಸಾವಳಗಿ, ಸಿದ್ದು ಹಿರೂರ, ಗಿರೀಶ ಆಲದಕಟ್ಟಿ, ಕೀರ್ತಿ ಗೋತಮಾರ, ರೇಣುಕಾ ಎಣ್ಣಿ, ಮೇಘಾ ಪೂಜೇರಿ, ಸ್ವಾತಿ ಕಲ್ಲಯ್ಯನವರ, ಶ್ವೇತಾ ಪೂಜೇರಿ, ವೈಶಾಲಿ ಚಿನಗುಡಿ, ಸೌಮ್ಯ ಚಿನಗುಡಿ, ಉಮಾಶ್ರೀ ಗುಂಡ್ಲೂರ, ಲಕ್ಷ್ಮೀ ಹರಿಜನ, ವಿಜಯಲಕ್ಷ್ಮೀ ಪಾಟೀಲ ಇದ್ದರು.