ಸಮಯಕ್ಕೆ ಸರಿಯಾಗಿ ನಿಗದಿತ ವೇತನ ಪಾವತಿಸಿ

14-10--krs1
ಸಮಯಕ್ಕೆ ಸರಿಯಾಗಿ ನಿಗದಿತ ವೇತನ ನೀಡುವಂತೆ ಒತ್ತಾಯಿಸಿ ಕಾವೇರಿ ನೀರಾವರಿ ನಿಗಮದ ನೂರಕ್ಕು ಹೆಚ್ಚು ಗುತ್ತಿಗೆ ನೌಕರರು ನಿಗಮದ ಕಾರ್ಯಪಾಲಕ ಕಛೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
Published on

ಕೆ.ಆರ್.ಸಾಗರ: ಸರ್ಕಾರದ ಮಾರ್ಗಸೂಚಿಯಂತೆ ಸಮಯಕ್ಕೆ ಸರಿಯಾಗಿ ನಿಗದಿತ ವೇತನ ನೀಡುವಂತೆ ಒತ್ತಾಯಿಸಿ ಕಾವೇರಿ ನೀರಾವರಿ ನಿಗಮದ ನೂರಕ್ಕು ಹೆಚ್ಚು ಗುತ್ತಿಗೆ ನೌಕರರು ನಿಗಮದ ಕಾರ್ಯಪಾಲಕ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಎಐಟಿಯುಸಿ ಅಂಗ ಸಂಸ್ಥೆ ಮೈಸೂರು ಡಿವಿಜನ್ ಇಂಡಸ್ಟ್ರಿಯಲ್ ವರ್ಕರ್ ಜನರಲ್ ಯೂನಿಯನ್ ಸಹಯೋಗದಲ್ಲಿ ಪ್ರತಿಭಟನೆ ನಡೆಸಿದ ನೀರುಗುಂಟಿಗಳು, ನಿಗಮದ ನಿರ್ಲಕ್ಷ್ಯ ಧೋರಣೆ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಿಗಮದ ಕಾರ್ಯಪಾಲಕ ಇಂಜಿನಿಯರ್ ರಾಮಮೂರ್ತಿ, ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ದೇವದಾಸ್.ಎನ್.ಕೆ ಅವರೊಂದಿಗೆ ಚರ್ಚಿಸಿದರು. ಸರ್ಕಾರದಿಂದ ಹಣ ಬಿಡುಗಡೆ ಆದ ತಕ್ಷಣ ಗುತ್ತಿಗೆದಾರರ ಮೂಲಕ ಸಂಬಳ ನೀಡಲಾಗುವುದು. ಸೌಲಭ್ಯ ಒದಗಿಸುವ ಕುರಿತು ಮುಂದಿನ ವಾರ ಗುತ್ತಿಗೆದಾರರು ಮತ್ತು ನೌಕರರ ಸಭೆ ಕೆರಯುವುದಾಗಿ ತಿಳಿಸಿದರು. ಬಳಿಕ ಗುತ್ತಿಗೆ ನೌಕರರಿಂದ ಮನವಿ ಸ್ವೀಕರಿಸಿದರು.

ಹಲವು ಬಾರಿ ಗುತ್ತಿಗೆದಾರ ಸರಿಯಾಗಿ ವೇತನ ಪಾವತಿ ಮಾಡಿಲ್ಲ. ತಾರತಮ್ಯ ಕುರಿತು ನಿಗಮದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸಂಘದ ಅಧ್ಯಕ್ಷ ಕುಮಾರ ಅಳಲು ತೋಡಿಕೊಂಡರು.

ಪ್ರತಿಭಟನೆಯಲ್ಲಿ ಕಾಮ್ರೆಡ್ ಸೋಮರಾಜೆ ಅರಸ್, ಶಿವಣ್ಣ, ಜಗನ್ನಾಥ್, ಗುತ್ತಿಗೆ ನೌಕರರಾದ ಸುಬ್ಬಣ್ಣ, ಶ್ರೀನಿವಾಸನ್, ರಾಮು, ಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net