

ಯಾದಗಿರಿ: ನಗರದ ಜಿಲ್ಲಾಡಳಿತ ಭವನದಲ್ಲಿನ ವಿವಿಧ ಜಿಲ್ಲಾ ಮಟ್ಟದ ಇಲಾಖೆಗಳ ಕಚೇರಿಗಳಲ್ಲಿ ಶುಕ್ರವಾರ ಬೆಳಗ್ಗೆ ಮೌನ ಆವರಿಸಿತ್ತು. ಎಂದಿನಂತೆ ತಡವಾಗಿ ಬರುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ತಮ್ಮ, ತಮ್ಮ ಕೆಲಸದಲ್ಲಿ ಮಗ್ನವಾಗಿತ್ತು.
ಇದಕ್ಕೆ ಕಾರಣ ಜಿಲ್ಲಾಧಿಕಾರಿ ಡಾ.ಸುಶೀಲಾ ಸಸ್ಪೆನ್ಸ್ ರೌಂಡ್ ಹಾಕಿದ್ದು. ಡಿಸಿ ಮೇಡಂ ನಿತ್ಯ ಕಾರು ಇಳಿದು ನೇರವಾಗಿ ತಮ್ಮ ಚೇಂಬರ್ಗೆ ಹೋಗುತ್ತಾರೆ ಎಂದು ತಿಳಿದಿದ್ದ ಸಿಬ್ಬಂದಿ ವರ್ಗ, ಮನಸ್ಸಿಗೆ ಬಂದ ಸಮಯಕ್ಕೆ ಕಚೇರಿಗೆ ಬರುತ್ತಿದ್ದರು. ಆದರೆ, ಶುಕ್ರವಾರ ಹಾಗಾಗಲಿಲ್ಲ. ಜಿಲ್ಲಾಧಿಕಾರಿಗಳು ಕಾರು ಇಳಿದಿದ್ದೇ ತಡ ನೇರವಾಗಿ ಜಿಲ್ಲಾಡಳಿತ ಭವನದ ಒಂದೊಂದೆ ಕಚೇರಿಗೆ ಭೇಟಿ ನೀಡುವ ಮೂಲಕ ತಡವಾಗಿ ಬರುವವರಿಕೆ ಶಾಕ್ ನೀಡಿದರು.
ಇಲ್ಲಿನ ಸಹಾಯಕ ಆಯುಕ್ತರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಕಾಮರ್ಿಕ, ಆಹಾರ, ವಾತರ್ಾ ಇಲಾಖೆ, ನಗರಾಭಿವೃದ್ಧಿ ಕೋಶ, ಚುನಾವಣೆ ಶಾಖೆ, ಗಣಿ ಮತ್ತು ಭೂ ವಿಜ್ಞಾನ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಹೀಗೆ ಹತ್ತಾರು ಇಲಾಖೆಗಳಿಗೆ ಎಡತಾಕಿ, ಹಾಜರಾತಿ ಪುಸ್ತಕಗಳನ್ನೂ ಪರಿಶೀಲಿಸಿದರು.