ಸಮಯ ಪರಿಪಾಲನೆಗೆ ನ್ಯಾಯ ಬೆಲೆ ಅಂಗಡಿಗಳಿಗೆ ಸೂಚನೆ

Oplus_131072
Oplus_131072
Published on


ಸಿದ್ದಾಪುರ : ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಮತ್ತು ಸಂಜೆ 3 ರಿಂದ ರಾತ್ರಿ 8ರ ವರೆಗೆ ಕಾರ್ಯನಿರ್ವಹಿಸಬೇಕು ಎಂದು ವಿರಾಜಪೇಟೆ ತಹಸೀಲ್ದಾರ್ ಎಚ್.ಎನ್ ರಾಮಚಂದ್ರ ಸೂಚನೆ ನೀಡಿದ್ದಾರೆ.


ಸ್ಥಳೀಯ ನ್ಯಾಯಬೆಲೆ ಅಂಗಡಿಯಲ್ಲಿ ಅನ್ನಭಾಗ್ಯ ಅಕ್ಕಿ ವಿತರಿಸಲು ವಿಳಂಬವಾಗಿರುವ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ಎಚ್ಚತ್ತ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ನಿರ್ದೇಶನ ನೀಡಿದ್ದಾರೆ.


ಮಂಗಳವಾರ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಸಿಬ್ಬಂದಿ ಕಾರ್ಯನಿರ್ವಹಣೆಗೆ ಗರಂ ಆದರೂ. ತರಾಟೆಗೆ ತೆಗೆದುಕೊಂಡು ಸರ್ಕಾರದ ಆದೇಶ ಪಾಲಿಸುವಂತೆ ಸೂಚನೆ ನಿಡಿದರು. ಪಡಿತರ ಪಡೆಯಲು ಜನರನ್ನು ಕಾಯಿಸಬಾರದು ಎಂದು ಸೂಚನೆ ನೀಡಿದರು. ಕೂಡಲೇ ನ್ಯಾಯ ಬೆಲೆ ಅಂಗಡಿಗಳ ನಿರ್ವಾಹಕರ ಸಭೆ ಕರೆಯುವಂತೆ ತಾಲೂಕು ಆಹಾರ ನಿರೀಕ್ಷಕರಿಗೆ ಸೂಚನೆ ನೀಡಿದರು.


ತಾಲೂಕು ಆಹಾರ ನಿರೀಕ್ಷಕಿ ಸೀನಾ ಕುಮಾರಿ, ಕಂದಾಯ ಪರಿ ವೀಕ್ಷಕ ಅನೀಲ್, ಗ್ರಾಮಾಧಿಕಾರಿ ಓಮಪ್ಪ ಬಾಣಕರ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೋಹನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಗೋಪಾಲ, ಸದಸ್ಯರಾದ ಜಾಫರ್ ಆಲಿ, ವಲಯ ಕಾಂಗ್ರೇಸ್ ಅಧ್ಯಕ್ಷ ಪ್ರತೀಶ,ಮಾಜಿ ಗ್ರಾ.ಪಂ.ಸದಸ್ಯ ಹುಸೇನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net