ಸಮನ್ವಯದಿಂದ ಸಾಧ್ಯವಿದೆ ಭ್ರಷ್ಟಾಚಾರ ನಿಗ್ರಹ

CTD brstachard virudda jagruti
Published on

ಚಿತ್ರದುರ್ಗ: ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ ಎಂದು ಚಿತ್ರದುರ್ಗ ಲೋಕಾಯುಕ್ತ ಎಸ್‌ಪಿ ಎನ್.ವಾಸುದೇವರಾಮ ಹೇಳಿದರು.

ಕರ್ನಾಟಕ ಲೋಕಾಯುಕ್ತ ಮತ್ತು ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಡಯಟ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಭ್ರಷ್ಟಾಚಾರ ವಿರು ದ್ಧದ ಜಾಗೃತಿ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಹಣ, ವಸ್ತು ರೂಪದ ಆಮಿಷ ಒಡ್ಡುವುದು ಭ್ರಷ್ಟಾಚಾರವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಸುಶಿಕ್ಷಿತರಲ್ಲೇ ಭ್ರಷ್ಟಾಚಾರದೆಡೆ ಸಕಾರಾತ್ಮಕ ಭಾವನೆ ಇರುವುದು ಆತಂಕದ ಸಂಗತಿಯಾಗಿದೆ ಎಂದರು.

ಕೈ ತುಂಬಾ ವೇತನ ಪಡೆಯುವ ಅಧಿಕಾರಿ, ನೌಕರರು ಆತ್ಮಾವಲೋಕನ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣಕ್ಕೆ ಕಾರ್ಯೋನ್ಮುಖರಾಗಬೇಕಿದೆ ಎಂದ ಅವರು, ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತು ವಿವರಿಸಿದರು.

ಲೋಕಾಯುಕ್ತ ಪಿಐ ಮಂಜುನಾಥ ಮಾತನಾಡಿ, ದೇಶ ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಭ್ರಷ್ಟಾಚಾರ ಬಹುಮುಖ್ಯ ಸಮಸ್ಯೆ ಯಾಗಿದೆ. ಸರ್ಕಾರಿ ಅಧಿಕಾರಿ, ನೌಕರರು ಭ್ರಷ್ಟಾಚಾರ ವಿರುದ್ಧ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಇವತ್ತಿನ ಪರಿಸ್ಥಿತಿ ಗಮನಿಸಿದರೆ ಭ್ರಷ್ಟಾಚಾರ ಗಾಳಿಯಲ್ಲೂ ಸೇರಿಕೊಂಡಿದೆಯೆನೋ ಎಂಬಂತೆ ಭಾಸವಾಗುತ್ತಿದೆ ಎಂದರು.

ಡಿಡಿಪಿಐ ಎಂ.ಆರ್.ಮಂಜುನಾಥ್ ಮಾತನಾಡಿದರು. ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್, ಬಿಇಒಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಗಳು, ಪತ್ರಾಂಕಿತ ವ್ಯವಸ್ಥಾಪಕರು, ಅಧೀಕ್ಷಕರು, ಡಯಟ್‌ನ ಹಿರಿಯ ಉಪನ್ಯಾಸಕರು ,ಡಯಟ್ ಹಾಗೂ ಡಿಡಿಪಿಐ ಕ ಚೇ ರಿ ಸಿಬ್ಬಂದಿ ಇದ್ದರು. ಲೋಕಾಯುಕ್ತ ಪಿಐ ಸಂಗಮನಾಥ ಎಚ್.ಹೊಸಮನಿ ಸ್ವಾಗತಿಸಿದರು. ಬಿಇಒ ನಾಗಭೂಷಣ್ ವಂದಿಸಿದರು. ಉಪನ್ಯಾ ಸಕ ಎಸ್.ಬಸವರಾಜು ನಿರೂಪಿಸಿದರು.

(ಸಿಟಿಡಿ ಭ್ರಷ್ಟಾಚಾರ ವಿರುದ್ಧ ಜಾಗೃತಿ)

ಚಿತ್ರದುರ್ಗ ಡಯಟ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಭ್ರಷ್ಟಾಚಾರ ವಿರುದ್ಧದ ಜಾಗೃತಿ ಸಪ್ತಾಹವನ್ನು ಲೋಕಾಯುಕ್ತ ಎಸ್‌ಪಿ ಎನ್.ವಾ ಸುದೇವರಾಮ ಉದ್ಘಾಟಿಸಿದರು. ಎಂ.ಆರ್.ಮಂಜುನಾಥ್, ಎಂ.ನಾಸೀರುದ್ದೀನ್, ಮಂಜುನಾಥ್, ಸಂಗಮನಾಥ ಎಚ್.ಹೊಸಮನಿ ಇತರರು ಇದ್ದರು.

----

30ರಂದು ಜಾಗೃತಿ ಸಪ್ತಾಹ

ಚಿತ್ರದುರ್ಗ: ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಮತ್ತು ಜಿಪಂ ಆಶ್ರಯದಲ್ಲಿ ಅ.30ರಂ ದು ಬೆಳಗ್ಗೆ 10ಕ್ಕೆ ಜಿಪಂದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಸಪ್ತಾಹ-2024 ಮತ್ತು ರಾಷ್ಟ್ರದ ಏಳಿಗೆಗಾಗಿ ಸಮಗ್ರತೆಯ ಸಂಸ್ಕೃತಿ ಒಂದು ದಿನದ ಕಾರ‌್ಯಾಗಾರವನ್ನು ಆಯೋಜಿಸಲಾಗಿದೆ. ಜಿಲ್ಲಾ, ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಕಾರ‌್ಯಾಗಾರಕ್ಕೆ ತಪ್ಪದೇ ಹಾಜರಾಗ ಬೇಕೆಂ ದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net