ಸಮತೋಲಿತ ಆಹಾರ ಸಮೃದ್ದ ಜೀವನಕ್ಕೆ ದಾರಿ

KLE NEWS_1
ಶುಕ್ರವಾರ ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ಕೆಎಲ್‌ಇ ಸಂಸ್ಥೆಯ ಇನ್ಸಿಟ್ಯೂಟ್ ಆ್ ನರ್ಸಿಂಗ್ ಸೈನ್ಸ್‌ನ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪೌಷ್ಠಿಕ ಆಹಾರ ದಿನಾಚರಣೆಗೆ ಸತ್ವ ನ್ಯೂಟ್ರಿಷನ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ ಚೇತನಾ ಬಿ.ಕೆ ಚಾಲನೆ ನೀಡಿದರು.
Published on

ರಾಷ್ಟ್ರೀಯ ಪೌಷ್ಠಿಕ ಆಹಾರ ದಿನಾಚರಣೆ
ಬೆಳಗಾವಿ:
ಸಮತೋಲಿತ ಆಹಾರ ಸಮೃದ್ದ ಜೀವನಕ್ಕೆ ದಾರಿಯಾಗಿದೆ ಎಂದು ಸತ್ವ ನ್ಯೂಟ್ರಿಷನ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ ಚೇತನಾ ಬಿ.ಕೆ ಅವರು ಮಾತನಾಡುತ್ತಿದ್ದರು. ಶುಕ್ರವಾರ ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ಕೆಎಲ್‌ಇ ಸಂಸ್ಥೆಯ ಇನ್ಸಿಟ್ಯೂಟ್ ಆ್ ನರ್ಸಿಂಗ್ ಸೈನ್ಸ್‌ನ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪೌಷ್ಠಿಕ ಆಹಾರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂತಹ ಕಾರ್ಯಕ್ರಮಗಳಿಂದ ಜನಸಾಮ್ಯಾನ್ಯರಿಗೆ ಪೌಷ್ಟಿಕ ಆಹಾರದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಮುಂಬರುವ ದಿನಗಳಲ್ಲಿ ದಾದಿಗಳಾಗುವ ತಾವು ಡಾಕ್ಟರ ಮತ್ತು ರೋಗಿಗಳ ಕೊಂಡಿಯಾಗಿ, ಅಗತ್ಯವಿರುವ ಪೌಷ್ಠಿಕ ಆಹಾರ ಬಗ್ಗೆ ಮಾಹಿತಿ ನೀಡಬೇಕು. ಅದಕ್ಕೆ ತಕ್ಕಂತೆ ವ್ಯಾಯಾಮ, ಆಟ, ದೈಹಿಕ ಶ್ರಮಗಳನ್ನು, ವಾಯು ವಿಹಾರಗಳನ್ನು ಪ್ರಾರಂಭಿಸುವ ಮೂಲಕ ಬಲಿಷ್ಟರಾಗಿರಿ ಎಂದು ಚೇತನಾ ಅವರು ಸಲಹೆ ನೀಡಿದರು.
ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆ ನಿರ್ದೇಶಕ ಡಾ.ಎಸ್ ಸಿ ಧಾರವಾಡ ಅವರು ಮಾತನಾಡಿ, ಇಂದಿನ ಯುಗ ಪಿಜ್ಜಾ, ಬರ್ಗರ್, ಡೊನೆಟ್‌ಗಳಂತಹ ಜಂಕಪುಡ್‌ಗಳ ಯುಗವಾಗಿದೆ. ಜನತೆ ಇವುಗಳನ್ನು ಸೇವಿಸುವುದರಿಂದ ನಮ್ಮ ಶರೀರ ಅಪೌಷ್ಟಿಕತೆಯ ಆಗರವಾಗುತ್ತಿದ್ದು, ಇದರಿಂದ ನಮ್ಮ ಯುವ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ. ನಾವು ಬಲಿಷ್ಟರಾಗಿದ್ದರೆ ಮಾತ್ರ ನಮ್ಮ ಕುಟುಂಬ, ನಮ್ಮ ರಾಜ್ಯ, ನಮ್ಮ ರಾಷ್ಟ್ರಕ್ಕೆ ಒಳ್ಳೆಯ ಸಂಪನ್ಮೂಲರಾಗಿರಬಹುದಾಗಿದೆ. ಅದಕ್ಕಾಗಿ ಎಲ್ಲರೂ ಸಮತೋಲಿತ ಪೌಷ್ಟಿಕ ಆಹಾರ ಸೇವನೆಯನ್ನು ರೂಢಿಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಎಲ್‌ಇ ಹೊಮಿಯೊಪತಿ ಕಾಲೇಜಿನ ಪ್ರಾಂಶುಪಾಲ ಡಾ ಎಮ್.ಎ.ಉಡಚನಕರ ಮಾತನಾಡಿ, ಇಂದಿನ ಜೀವನದಲ್ಲಿ ಆಹಾರ ಪದ್ದತಿಯ ಬಲಾವಣೆಯಿಂ ಅಪೌಷ್ಟಿಕತೆಯ ಹೆಚ್ಚುತ್ತಿದ್ದು. ಇದನ್ನು ಹೊಗಲಾಡಿಸಲು ನಾವು ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದರು.
ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಶೂಶ್ರಕಿಯರು, ವಿದ್ಯಾರ್ಥಿಗಳು, ಆಹಾರ ಪದ್ದತಿಯ ಚಿತ್ರಪಟ ಮತ್ತು ವಿವಿಧ ತರಕಾರಿಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ನರ್ಸಿಂಗ ಕಾಲೇಜಿನ ಬೋಧಕ ವರ್ಗ, ವಿದ್ಯಾರ್ಥಿಗಳು ಮತ್ತು ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸಿಬ್ಬಂದಿ ಕಾರ್ಯಕ್ರಮದ್ಲಿ ಪಾಲ್ಗೊಂಡಿದ್ದ್ದರು. ಕಾರ್ಯಕ್ರಮವನ್ನು ಕೆಎಲ್‌ಇ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ವಿಕ್ರಾಂತ ನೇಸರಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net