

ಹೊಸಪೇಟೆ: ಮುಂದುವರಿದ ರಾಷ್ಟçಗಳು ಸಾಮಾಜಿಕ ಸಂಶೋಧನೆ ಮೂಲಕ ಹೊಸ ವಿಚಾರಗಳು ಹಾಗೂ ಆಲೋಚನೆಗಳನ್ನು ಜಗತ್ತಿಗೆ ಪರಿಚಯಿಸುವದರೊಂದಿಗೆ ಜ್ಞಾನವನ್ನು ತಮ್ಮ ಆಡಳಿತ ಸಾಧನವಾಗಿಸಿಕೊಂಡಿದ್ದಾರೆ ಎಂದು ಕರ್ನಾಟಕ ಮುಕ್ತ ವಿವಿಯ ಪ್ರಾಧ್ಯಾಪಕ ಡಾ.ಸಂತೋಷ್ ನಾಯಕ್ ಅಭಿಪ್ರಾಯಪಟ್ಟರು.
ಕನ್ನಡ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಸೋಮವಾರ ಸಾಮಾಜಿಕ ಸಂಶೋಧನೆ : ವರ್ತಮಾನದ ನೆಲೆಗಳು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಸಾಮಾಜಿಕ ಸಂಶೋಧನೆ ಎನ್ನುವುದು ಬಹುಶಿಸ್ತಿನ ನೆಲೆಯಲ್ಲಿ ಸಂಶೋಧನೆಗಳನ ಕೈಗೊಂಡಾಗ ಮನುಷ್ಯನ ವರ್ತನೆಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಇದರಿಂದ ವೈಜ್ಞಾನಿಕ ವಿಧಾನದಿಂದ ಸಮಾಜದಲ್ಲಿನ ಅನೇಕ ಕುಂದುಕೊರತೆಗಳಿಗೆ ಪರಿಹಾರೋಪಾಯಗಳನ್ನು ಕಾಣಬಹುದು. ಪ್ರಮುಖವಾಗಿ ಇದರಿಂದ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕಾದರೆ, ಸಾಮಾಜಿಕ ಸಂಶೋಧನೆ ನಿರಂತರವಾಗಿ ನಡೆಯಬೇಕು. ಆದರೆ ನಮ್ಮಲ್ಲಿ ಮೂಲಸೌಕರ್ಯದ ಕೊರತೆಯಿದೆ. ನಮ್ಮ ರಾಷ್ಟçದ ಮಾನವ ಸಂಪನ್ಮೂಲಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು, ನಮ್ಮ ಜ್ಞಾನ ಭಂಡಾರವನ್ನು ವೃದ್ಧಿಸಿ, ಅಭಿವೃದ್ಧಿ ಹೊಂದಲು ಸಾಮಾಜಿಕ ಸಂಶೋಧನೆ ಒಂದು ವೇದಿಕೆಯಾಗಿದೆ ಎಂದರು.
ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಹಾಗೂ ಸಮಾಜ ವಿಜ್ಞಾನಕ್ಕೂ 70 ದಶಕಗಳ ಸಂಬAಧವಿದೆ. ಸಾಹಿತ್ಯ ನಿರ್ಮಾಣದಲ್ಲಿ ಸಾಮಾಜಿಕ ಸಂಶೋಧನೆ ಬಹುಮುಖ್ಯವಾಗಿದ್ದು, ಜನಸಾಮಾನ್ಯರ ನಾಡಿ ಮಿಡಿತವನ್ನು ಅರ್ಥೈಸಲು ಸಾಮಾಜಿಕ ಸಂಶೋಧನೆ ಸಹಾಯಕವಾಗಿದೆ ಎಂದರು.