ಸಮಗ್ರ ಫುಡ್ ಪಾರ್ಕ್ ಒಳಗೊಂಡ ಶ್ರೇಷ್ಠತೆಯ:ಕೇಂದ್ರ ಸ್ಥಾಪಿಸಲು ಅವಕಾಶ ಕೋರಿ ಮನವಿ

ಸಮಗ್ರ ಫುಡ್ ಪಾರ್ಕ್ ಒಳಗೊಂಡ ಶ್ರೇಷ್ಠತೆಯ:ಕೇಂದ್ರ ಸ್ಥಾಪಿಸಲು ಅವಕಾಶ ಕೋರಿ ಮನವಿ
Published on

ಹಾಸನ: ಜಿಲ್ಲೆಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ವಿದೇಶಗಳಿಗೆ ರಫ್ತು ಮಾಡಲು ಒಳ್ಳೆಯ ಅವಕಾಶವಿದೆ. ಇಸ್ರೇಲ್ ಸಂಸ್ಥೆಯ ಸಹಯೋಗದಲ್ಲಿ ಹಾಸನದಲ್ಲಿ ಶ್ರೇಷ್ಠತೆಯ ಕೇಂದ್ರ ಸ್ಥಾಪಿಸಲು ಅವಕಾಶ ನೀಡುವಂತೆ ಒಡನಹಳಿ ಫುಡ್ ಪಾರ್ಕ್ ಸಿಇಒ ಅಶೋಕ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಹಾಸನ ಜಿಲ್ಲೆಯ ಪ್ರಮುಖ ಬೆಳೆಗಳಾದ ತೆಂಗು, ಶುಂಠಿ, ಆಲೂಗಡ್ಡೆ, ಜೋಳ, ರಾಗಿ, ಕಾಫಿ, ರಾಜಮುಡಿ ಭತ್ತ ಮತ್ತು ಇತರ ಬೆಳೆಗಳನ್ನು ಉಪ ಉತ್ಪನ್ನಗಳನ್ನಾಗಿ ಪರಿವರ್ತಿಸಿ ವಿದೇಶಕ್ಕೆ ರಫ್ತು ಮಾಡುವ ಯೋಜನೆ ಸಿದ್ಧಗೊಂಡಿದೆ. ಕರ್ನಾಟಕದ ಆಕೃತಿ ಅಗ್ರಿಟೆಕ್ ಸಂಸ್ಥೆ ಸಹಯೋಗದಲ್ಲಿ ಇಸ್ರೇಲ್‌ನ ಎಂಡಿ ಹೈ ಆರ್ ಹಾಗೂ ಡಿ ಪ್ರಾಜೆಕ್ಟ್ ಹಾಸನದಲ್ಲಿ ಶ್ರೇಷ್ಠತೆಯ ಕೇಂದ್ರ ಸ್ಥಾಪಿಸಲು ಸುಮಾರು 25 ಕೋಟಿ ರೂ. ಹೂಡಿಕೆ ಮಾಡಲು ಮುಂದೆ ಬಂದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈಗಾಗಲೇ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕು, ಹಳ್ಳಿ ಮೈಸೂರು ಹೋಬಳಿ, ಒಡನಹಳ್ಳಿ ಗ್ರಾಮದ ಸರ್ವೆ ನಂಬರ್ 124/12 ರಲ್ಲಿ ನ್ಯಾನೋ ಫುಡ್ ಪಾಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ತೆಂಗಿನ ಕಾಯಿಯಿಂದ ಹಾಲಿನ ಪುಡಿ ತಯಾರಿಸಿ ಅದನ್ನು ಯೂರೋಪ್ ರಾಷ್ಟ್ರಗಳಿಗೆ ರಫ್ತು ಮಾಡಲು ಯೋಜನೆ ರೂಪಿಸಲಾಗಿದೆ. ಈ ಪುಡಿ ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರುತ್ತದೆ. ಹಾಸನ ರೈತರು ಬೆಳೆಯುವ ಬೆಳೆಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಫುಡ್ ಪಾರ್ಕ್ ಒಳಗೊಂಡ ಶ್ರೇಷ್ಠತೆಯ ಕೇಂದ್ರ ಸ್ಥಾಪಿಸಲು ಸುಮಾರು 25 ಕೋಟಿ ರೂ. ಹೂಡಿಕೆ ಮಾಡುವ ಒಂದು ಪ್ರಸ್ತಾವವನ್ನು ಇಸ್ರೇಲ್ ಕಂಪನಿ ನಮ್ಮ ಮುಂದೆ ಇಟ್ಟಿದೆ. ಇದರಿಂದ ಜಿಲ್ಲೆಯ ಸುಮಾರು 15 ಸಾವಿರ ರೈತರಿಗೆ ಅನುಕೂಲ ಆಗುವುದರೊಂದಿಗೆ ಜಿಲ್ಲೆಯ ಕೀರ್ತಿ ವಿದೇಶಗಳಲ್ಲಿ ಹಬ್ಬುತ್ತದೆ. ಇದಕ್ಕೆ ಅಗತ್ಯ ಇರುವ 120 ಎಕರೆ ಜಮೀನು ಅವಶ್ಯವಿರುತ್ತದೆ. ತಾವುಗಳು ಸೂಕ್ತ ಮಾರ್ಗದರ್ಶನ ನೀಡಿ ಈ ಒಂದು ಯೋಜನೆ ಕಾರ್ಯರೂಪಕ್ಕೆ ಬರುವಂತೆ ಮಾಡಲು ಕೋರಿದರು.

ಇದೇ ವೇಳೆ ಜೈ ಬೀಮ್ ಬ್ರಿಗೇಡ್ ಸಂಘಟನಾ ಸಮಿತಿ ಜಿಲ್ಲಾಧ್ಯಕ್ಷ ರಾಜೇಶ್, ಚರಣ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net