

ಗೋಣಿಕೊಪ್ಪ: ರೈತ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿಕ ಸಮಾಜದ ವತಿಯಿಂದ ರೈತ- ವಿಜ್ಞಾನಿಗಳ ವಿಚಾರಗೋಷ್ಠಿ ಕಾರ್ಯಕ್ರಮ ಇಲ್ಲಿನ ಕೆವಿಕೆ ಸಭಾಂಗಣದಲ್ಲಿ ನಡೆಯಿತು.
ಪ್ರಗತಿಪರ ಕೃಷಿಕರಾದ ನಲ್ಲೂರು ಗ್ರಾಮದ ಸೋಮೇಂಗಡ ಗಣೇಶ್ ತಿಮ್ಮಯ್ಯ, ಹಳ್ಳಿಗಟ್ಟು ಗ್ರಾಮದ ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು. ಸೋಮೇಂಗಡ ಗಣೇಶ್ ತಿಮ್ಮಯ್ಯ ಮಾತನಾಡಿ, ಸಮಗ್ರ ಕೃಷಿಯಿಂದ ಮಾತ್ರ ಆರ್ಥಿಕವಾಗಿ ಬೆಳವಣಿಗೆ ಸಾಧ್ಯ. ಏಕ ಬೆಳೆ ಪದ್ಧತಿಯಿಂದ ಆರ್ಥಿಕ ನಷ್ಟ ಉಂಟಾಗಿ, ಕೃಷಿಯಿಂದ ದೂರ ಉಳಿಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಪ್ರಗತಿಪರ ರೈತ ರವಿಶಂಕರ್ ಮಾತನಾಡಿ, ಭತ್ತದ ಕೃಷಿಯಲ್ಲಿ ಬಿತ್ತನೆ ಬೀಜ ಪಡೆಯಲು ಯೋಜನೆ ರೂಪಿಸುವುದರಿಂದ ಆರ್ಥಿಕವಾಗಿ ನಷ್ಟ ತಪ್ಪಲಿದೆ. ಯುವ ಸಮೂಹ ಹೆಚ್ಚು ಆಸಕ್ತಿ ತೋರಬೇಕು ಎಂದರು.
ಕೃಷಿಕ ಸಮಾಜದ ಅಧ್ಯಕ್ಷ ಚೋಟು ಕಾವೇರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಸಮೂಹವನ್ನು ಕೃಷಿಯತ್ತ ಸೆಳೆಯಲು ಯೋಜನೆ ರೂಪಿಸಬೇಕಿದೆ ಎಂದರು.
ಕೃಷಿ ಇಲಾಖೆ ಉಪ ನಿರ್ದೇಶಕ ಬಾಲರಾಜ್ ಮಾತನಾಡಿ, ಕೃಷಿ ಇಲಾಖೆ ವತಿಯಿಂದ ದೊರೆಯುತ್ತಿರುವ ಸೌಲಭ್ಯ ಪಡೆದುಕೊಳ್ಳಲು ರೈತರು ಉತ್ಸಾಹ ತೋರಬೇಕಿದೆ. ಸಾಕಷ್ಟು ಯೋಜನೆಗಳು ಕೃಷಿಕರಿಗೆ ಪ್ರೋತ್ಸಾಹ ಆಗಿವೆ ಎಂದು ಹೇಳಿದರು.
ಕೆವಿಕೆ ಮುಖ್ಯಸ್ಥ ಡಾ. ಕಾಡ್ಯಮಾಡ ಎ. ದೇವಯ್ಯ, ಕೃಷಿ ಸಹಾಯಕ ನಿರ್ದೇಶಕ ಶಿವಮೂರ್ತಿ, ಕೃಷಿ ಅಧಿಕಾರಿ ಎ. ಜೆ. ರೀನಾ, ಕೆವಿಕೆ ವಿಜ್ಞಾನಿಗಳಾದ ಡಾ. ವೀರೇಂದ್ರಕುಮಾರ್, ಡಾ. ಪ್ರಭಾಕರ್ ಇದ್ದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ದಿನಾಚರಣೆ ಅಂಗವಾಗಿ ಪ್ರಗತಿಪರ ಕೃಷಿಕರಾದ ಸೋಮೇಂಗಡ ಗಣೇಶ್ ತಿಮ್ಮಯ್ಯ, ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು. ಬಾಲರಾಜ್, ಚೋಟು ಕಾವೇರಪ್ಪ, ಡಾ.ಕಾಡ್ಯಮಾಡ ಎ. ದೇವಯ್ಯ, ಶಿವಮೂರ್ತಿ, ಡಾ. ವೀರೇಂದ್ರಕುಮಾರ್ ಇದ್ದರು.