

ನರೇಗಲ್ಲ: ರೋಣ ಮತ್ತು ಗಜೇಂದ್ರಗಡ ತಾಲೂಕು ಭಾಗದಲ್ಲಿ ಫಲವತ್ತಾದ ಭೂಮಿಯಿದ್ದು, ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್. ಅಂಗಡಿ ಹೇಳಿದರು.
ಕೃಷಿ ವಿಶ್ವ ವಿದ್ಯಾಲಯ ಧಾರವಾಡ, ಐಸಿಎಆರ್ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ, ಕೃಷಿ ಇಲಾಖೆ ಗದಗ, ನರೇಗಲ್ಲ ಅಗ್ರಿ ಸ್ವರಾಜ್ ರೈತ ಉತ್ಪಾದಕರ ಕಂಪನಿ, ಸಮೃದ್ಧಿ ತೋಟಗಾರಿಕೆ ರೈತ ಉತ್ಪಾದನೆ ಕಂಪನಿ ಹಾಗೂ ರೈತ ಸಂಪರ್ಕ ಕೇಂದ್ರದ ವತಿಯಿಂದ ಪಟ್ಟಣದ ರೋಟರಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕೃಷಿ ವಿಜ್ಞಾನಿಗಳ ನಡೆಗೆ ರೈತರ ಕಡೆಗೆ ರೈತರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಸಾಯನಿಕ ಗೊಬ್ಬರದ ಬದಲಾಗಿ ಸಾವಯವ ಗೊಬ್ಬರ ಬಳಕೆಯಿಂದ ಲಾಭದ ಜತೆಗೆ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಗದಗ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಜಿ.ಎಚ್. ತಾರಾಮಣಿ ಮಾತನಾಡಿ, ರೈತರು ರಸಗೊಬ್ಬರಕ್ಕಾಗಿ ಹೆಚ್ಚು ಅಲೆದಾಟ ನಡೆಸದೇ ನ್ಯಾನೋ ಯೂರಿಯಾ ದ್ರಾವಣ ಬಳಸಬೇಕು. ನ್ಯಾನೋ ಯೂರಿಯಾ ಒಂದು ಚೀಲ ಯೂರಿಯಾ ರಸಗೊಬ್ಬರಕ್ಕೆ ಸಮಾನವಾಗಿದೆ. ನ್ಯಾನೋ ಯೂರಿಯಾ ದ್ರಾವಣ ಬಳಸುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದರು.
ಕೃಷಿ ವಿಜ್ಞಾನಿಗಳು ಹಾಗೂ ರೈತರಿಗೆ ಸಂವಾದ ಕಾರ್ಯಕ್ರಮ ಜರುಗಿತು. ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ.ಎಲ್. ಪಾಟೀಲ, ಕೃಷಿ ಪಂಡಿತ ಗುರುನಾಥ ಓದುಗೌಡ್ರ, ವಿಜಯಪುರದ ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ, ಸಹ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ. ಬೆಳ್ಳಿ, ಕೃಷಿ ಇಲಾಖೆಯ ಉಪನಿರ್ದೇಶಕ ಬಿ.ಆರ್. ಪಾಲಾಕ್ಷಗೌಡ, ಕೆ.ವಿ.ಕೆ. ವಿಜ್ಞಾನಿ ಡಾ. ಸುಧಾ ಮಂಕಣಿ, ಬೆಳವಟಗಿ ಕೃ ಸಂ ಕೇಂದ್ರದ ಮುಖ್ಯಸ್ಥ ಡಾ. ಸಿ.ಎಂ. ರಫಿ, ಕೃಷಿ ವಿಜ್ಞಾನಿಗಳಾದ ಡಾ. ಸಿ.ಆರ್. ಪಾಟೀಲ, ಡಾ. ಎಂ.ಡಿ. ಪಾಟೀಲ, ಡಾ. ಬಿ.ಎನ್. ಮೊಟಗಿ, ಡಾ. ಸಂಗಶೆಟ್ಟಿ ಭಾಲ್ಕುಂದೆ, ಡಾ. ವಿನಾಯಕ ನಿರಂಜನ, ಶಿವಲಿಂಗಪ್ಪ ಹೊಟ್ಕರ್ ರೋಣ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವಿಂದ್ರಗೌಡ ಪಾಟೀಲ, ರೈತ ಸಂಪರ್ಕ ಕೇಂದ್ರ ಅಧಿಕಾರಿ ಸಿ.ಕೆ. ಕಮ್ಮಾರ, ಪ್ರಗತಿಪರ ರೈತರಾದ ಮಲ್ಲಣ್ಣ ಮೇಟಿ, ಗಿರೀಶಗೌಡ ಪಾಟೀಲ, ಶಿವಣ್ಣ ಸೂಡಿ, ಎ.ಆರ್. ಮಲ್ಲನಗೌಡ್ರ, ರಮೇಶ ಕುಲಕರ್ಣಿ, ಸುನೀಲ ಬಸವರಡ್ಡೆರ, ಮುತ್ತಣ್ಣ ಬೂದಿಹಾಳ, ಡಾ. ಕೆ.ಬಿ. ಧನ್ನೂರ, ಎಸ್.ಎ. ಪಾಟೀಲ, ಶರಣಪ್ಪ ಧರ್ವಯತ ಸೇರಿದಂತೆ ನರೇಗಲ್ಲ, ರೋಣ ಮತ್ತು ಹೊಳೆ ಆಲೂರ ಹೋಬಳಿಯ ರೈತರು ಇದ್ದರು.