ಸಮಗ್ರ ಕೃಷಿ ಪದ್ಧತಿ ಅನುಸರಿಸಿ

oplus_1048578
ಕಮಲನಗರ ತಾಲೂಕಿನ ಮುಧೋಳ(ಬಿ)ದಲ್ಲಿ ಆಯೋಜಿಸಿದ ಬಸವಜ್ಯೋತಿ ಕಾರ್ಯಕ್ರಮವನ್ನು ನಿವೃತ್ತ ಅಪರ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಮಠ ಉದ್ಘಾಟಿಸಿದರು. ಹಾವಗಿರಾವ ವಟಗೆ, ಗಣಪತರಾವ ಖೂಬಾ, ಅಂತೇಶ್ವರ ಶೆಟಕಾರ, ಬಾಬುರಾವ ಕುಲಾಲ್ ಇದ್ದರು.
Published on

ಕಮಲನಗರ: ಸಮಗ್ರ ಕೃಷಿ ಪದ್ಧತಿ, ಕೀಟ ಮತ್ತು ರೋಗ ನಿಯಂತ್ರಣ ಪದ್ಧತಿ ಅನುಸರಿಸಿದರೆ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ನಿವೃತ್ತ ಅಪರ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಮಠ ಹೇಳಿದರು.

ಮುಧೋಳ(ಬಿ) ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ರೈತ ಕೂಟ ಮತ್ತು ಬಸವಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರಿಗೆ ಇರುವ ಮಾನ್ಯತೆ ಕೃಷಿಕರಿಗೂ ಬರಬೇಕು. ಕೃಷಿ ಉಳಿದರೆ ಮಾತ್ರ ದೇಶದ ಭವಿಷ್ಯ ಸುಭದ್ರವಾಗಿರುತ್ತದೆ. ಯುವಕರು ಕೃಷಿ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಅಧಿಕಾರಿ ಅಂತೇಶ್ವರ ಶೆಟಕಾರ ಮಾತನಾಡಿ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ರೈತರು ಹೆಚ್ಚು ಇಳುವರಿ ಪಡೆದು ಆರ್ಥಿಕ ಸಬಲೀಕರಣರಾಗಬೇಕು ಎಂದು ಕರೆ ನೀಡಿದರು.

ಬಾಬುರಾವ ಕುಲಾಲ್ ಮಾತನಾಡಿ, ರಾಸಾಯನಿಕ ಗೊಬ್ಬರ ಜತೆ ಸಾವಯವ ಗೊಬ್ಬರ ಅಳವಡಿಸಿ ಮಣ್ಣಿನ ಫಲವತ್ತತೆ ಕಾಪಾಡಬೇಕು. ಕಬ್ಬು, ಪೇರಲ್, ಬಾಳೆಹಣ್ಣು, ಸಾಗವಾನಿ, ಸೇಬು ಮುಂತಾದ ಬೆಳೆಗಳನ್ನು ಬೆಳೆಯಬೇಕು ಎಂದರು.

ಭಾರತ ಸ್ವಾಭಿಮಾನಿ ಬಳಗದ ತಾಲೂಕಾಧ್ಯಕ್ಷ ಗಣಪತರಾವ ಖೂಬಾ ಅಧ್ಯಕ್ಷತೆ ವಹಿಸಿದ್ದರು. ವಿಶ್ವನಾಥರಾವ ಖೂಬಾ, ಎಸ್.ಎಸ್. ಮೈನಾಳೆ, ಜಗನ್ನಾಥ ಚಿಮ್ಮಾ, ನಾಗಯ್ಯ ಸ್ವಾಮಿ, ಬಾಬುರಾವ ಹಲಬರ್ಗೆ, ಧೂಳಪ್ಪ ನಂದನವರೆ, ಭಾನುದಾಸ ಕಾರಬಾರಿ, ಗುರುನಾಥ ವಟಗೆ, ಶಂಕರರಾವ ಉದಗೀರೆ, ಸಹಾಯಕ ತೋಟಗಾರಿಕೆ ಅಧಿಕಾರಿ ಅಣ್ಣಾರಾವ ಪಾಟೀಲ್ ಇತರರಿದ್ದರು.

ಹಾವಗಿರಾವ ವಟಗೆ ಸ್ವಾಗತಿಸಿದರು. ಗಜಾನಂದ ವಟಗೆ ನಿರೂಪಣೆ ಮಾಡಿದರು. ಕೃಷಿ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net