ಸಮಗ್ರ ಅಭಿವೃದ್ಧಿಗಾಗಿ ಪ್ರಕಾಶ್ ಮರು ಆಯ್ಕೆಯಾಗಲಿ

25kgl photo3.
ಕೊಳ್ಳೇಗಾಲ ಪಟ್ಟಣದ ಮಂಜುನಾಥ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಪರ ಪಕ್ಷದ ಮುಖಂಡರು ಮತಯಾಚಿಸಿದರು.
Published on


ಕೊಳ್ಳೇಗಾಲ: ಸಾಮಾಜಿಕ ಕಳಕಳಿ ಹೊಂದಿರುವ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಅವರನ್ನು ಹೆಚ್ಚಿನ ಅಂತದಿಂದ ಗೆಲ್ಲಿಸಬೇಕು ಎಂದು ಶಾಸಕ ಎನ್.ಮಹೇಶ್ ಮನವಿ ಮಾಡಿದರು.

ನಗರಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ 21ನೇ ವಾರ್ಡ್ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಬಳಿಕ ಮಾತನಾಡಿದರು.

ಮತದಾರರು ಈ ಹಿಂದಿನ ನಗರಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಪ್ರಕಾಶ್ ಅವರನ್ನು ಗೆಲ್ಲಿಸಿದ್ದರು. ಅಂತೆಯೇ ಇದೀಗ ಉಪ ಚುನಾವಣೆಯಲ್ಲೂ ಪ್ರಕಾಶ್ ನಿಮ್ಮ ಆಶೀರ್ವಾದ ಬಯಸಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು, ಈ ಬಾರಿಯೂ ಅವರ ಕೈಹಿಡಿಯಬೇಕು ಎಂದರು.

ಅನಿವಾರ್ಯ ಕಾರಣದಿಂದ ಅಧಿಕಾರ ಕಳೆದುಕೊಂದ ಸಂದರ್ಭದಲ್ಲೂ ಪ್ರಕಾಶ್ ಕಷ್ಟ-ಸುಖಗಳಿಗೆ ಸ್ಪಂದಿಸಿದ್ದಾರೆ. ವಾರ್ಡ್ ಅನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬೇಕೆಂಬ ಹಂಬಲ ಹೊಂದಿರುವ ಪ್ರಕಾಶ್ ಅವರನ್ನು ಮರು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಮತದಾರರು ಪ್ರಕಾಶ್ ಅವರಿಗೆ ಮತ ನೀಡುವ ಮೂಲಕ ಜನಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ದತ್ತೇಶ್ ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕಿನಕಹಳ್ಳಿ ರಾಚಯ್ಯ, ಜಿಲ್ಲಾ ವಕ್ತಾರ ಬಸವರಾಜು, ನಗರಸಭೆ ನಾಮ ನಿರ್ದೇಶಿತ ಸದಸ್ಯ ಸೆಲ್ವರಾಜು, ಮುಖಂಡರಾದ ಮಧುಚಂದ್ರ, ಮರಿಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net