ಸಮ ಸಮಾಜ ನಿರ್ಮಾಣಕ್ಕೆ ಯತ್ನಿಸಿದ್ದ ಅಂಬಿಗರ ಚೌಡಯ್ಯ

22 skpp 1
Published on

ಸಕಲೇಶಪುರ: ವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸಮ ಸಮಾಜ ನಿರ್ಮಾಣಕ್ಕೆ ಯತ್ನಿಸಿದವರು ಅಂಬಿಗರ ಚೌಡಯ್ಯ ಎಂದು ತಹಸೀಲ್ದಾರ್ ಮೇಘನಾ ಅಭಿಪ್ರಾಯಪಟ್ಟರು.

ಮಂಗಳವಾರ ಮಿನಿ ಆಡಳಿತಸೌಧದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಅವರ 905ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ನ್ಯೂನತೆಗಳನ್ನು ಕಟುಶಬ್ದದಲ್ಲಿ ಖಂಡಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದರು. ಆದ್ದರಿಂದಲೇ ಅವರನ್ನು ನಿಷ್ಠೂರವಾದಿ ವಚನಕಾರ ಎಂದೇ ಕರೆಯಲಾಗುತ್ತಿತ್ತು ಎಂದರು.

ಗಂಗಾಮತ ಸಮಾಜದ ಅಧ್ಯಕ್ಷ ಧರ್ಮಪ್ಪ ಮಾತನಾಡಿ, ಜಾತಿ ವ್ಯವಸ್ಥೆಯನ್ನು ತೊಡೆದು ಹಾಕುವ ಉದ್ದೇಶಕ್ಕಾಗಿ ತಮ್ಮ ಬದುಕನ್ನೇ ಸವೆಸಿದ ದಾರ್ಶನಿಕರನ್ನು ಜಾತಿಯ ಮೂಲಕ ಗುರುತಿಸುತ್ತಿರುವುದು ಅವರಿಗೆ ಮಾಡುತ್ತಿರುವ ಅವಮಾನವಾಗಿದೆ. ಮಹಾತ್ಮರು ಹಾಕಿಕೊಟ್ಟ ಪಂಕ್ತಿಯಲ್ಲಿ ಸಾಗುವ ಮೂಲಕ ಮಹಾತ್ಮರಿಗೆ ನಿಜವಾದ ಗೌರವ ಸಲ್ಲಿಸಬೇಕು ಎಂದರು.

ಗಂಗಾಮತ ಸಮಾಜದ ಉಪಾಧ್ಯಕ್ಷ ಸೋಮಪ್ಪ ಮಾತನಾಡಿ, 1990ರಿಂದಲೂ ಗಂಗಾಮತ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ ಭೂಮಿ ನೀಡುವಂತೆ ವಿನಂತಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕು ಆಡಳಿತ ಬಲಾಢ್ಯ ಸಮುದಾಯಗಳ ಪರವಾಗಿ ವರ್ತಿಸುತ್ತಿದೆ ಎಂದರು.

ಕಾರ್ಯದರ್ಶಿ ಸೋಮಶೇಖರ್, ಶಾರದಮ್ಮ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net