ಸಭೆಗಳಿಗೆ ಅಧಿಕಾರಿಗಳು ಹಾಜಜು ಕಡ್ಡಾಯ

Published on

ಹೊಸಪೇಟೆ: ಅಧಿಕಾರಿಗಳು ಸಭೆಗೆ ಗೈರಾಗುವುದು ಸರಿ ಕ್ರಮವಲ್ಲ ಎಂದು ಕೊಟ್ಟೂರು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಡಿ.ಟಿ.ಮಂಜುನಾಥ ಹೇಳಿದರು.

ಕೊಟ್ಟೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಂಗಳವಾರ ಮಾತನಾಡಿದರು.

ಸಭೆಯಲ್ಲಿ ಸಭೆಗೆ ಕೃಷಿ, ನಿರ್ಮಿತಿ, ಕೈಗಾರಿಕ, ಆಹಾರ ಸೇರಿ ಅನೇಕ ಇಲಾಖೆ ಅಧಿಕಾರಿಗಳು ಗೈರಾಗಿದ್ದಕ್ಕೆ ಆಡಳಿತಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿ ಅವರು, ಇಲಾಖೆ ಪ್ರಗತಿ ಮಾಹಿತಿ ತಿಳಿಯದೇ ಇದ್ದರೆ ಮೇಲಾಧಿಕಾರಿಗಳಿಗೆ ಉತ್ತರಿಸುವು ಹೇಗೆ? ಇನ್ನಾದರೂ ಎಲ್ಲ ಅಧಿಕಾರಿಗಳು ಸಭೆಗೆ ಹಾಜರಾಗಬೇಕು. ತಾಲೂಕಿನಲ್ಲಿ ಶಿಥಿಲಗೊಂಡ ಅಂಗನವಾಡಿ ಕೇಂದ್ರಗಳ ಮಾಹಿತಿಯನ್ನು ತಾಪಂ ಕಚೇರಿಗೆ ನೀಡಬೇಕು. ಸಭೆಯಲ್ಲಿ ಇಲಾಖೆ ಅಧಿಕಾರಿಗಳು ಸಮರ್ಪಕ ವರದಿ ನೀಡಬೇಕು ಎಂದರು.

ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ಕಾರ್ಯ ಕುರಿತು ಪ್ರಶ್ನಿಸಿದಾಗ, ಶಿಕ್ಷಣ ಇಲಾಖೆ ಇಸಿಒ ನಿಂಗಪ್ಪ ಉತ್ತರಿಸಿ, ತಾಲೂಕಿನಲ್ಲಿ ಸಮೀಕ್ಷೆ ನಡೆಸಲು 274 ಶಿಕ್ಷಕರನ್ನು ನಿಯೋಜಿಸಿದೆ. ತಾಂತ್ರಿಕ ತೊಂದರೆ ಕಾರಣಕ್ಕೆ, 10 ಕುಟುಂಬ ಸದಸ್ಯರ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ ಎಂದು ಉತ್ತರಿಸಿದರು.

ಶಿಕ್ಷಣ ಇಲಾಖೆ ಪ್ರಭಾರಿ ಬಿ.ಆರ್.ಸಿ. ಜಿ.ರವೀಂದ್ರ ಮಾತನಾಡಿ, ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಪಠ್ಯ ಪುಸ್ತಕ, ಸಮವಸ್ತçಗಳನ್ನು ವಿತರಿಸಿದೆ. ಶೂ, ಸಾಕ್ಸ ಖರೀದಿಗೆ ಎಸ್‌ಡಿಎಂಸಿ ಖಾತೆಗೆ ಮೊತ್ತ ಜಮಾ ಮಾಡಿದೆ. ತಾಲೂಕಿನಲ್ಲಿರುವ 24 ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ 5 ವಸತಿ ನಿಲಯಗಳು ತಾಲೂಕಿನಲ್ಲಿದ್ದು, ಖಾಲಿ ಇರುವ 9 ಅಡುಗೆ ತಯಾರಕರ ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದೆ. ಕಾನೂನು ಪದವೀಧರರಿಗೆ ಮಾಸಿಕವಾಗಿ ಸರ್ಕಾರದ ನಿರ್ದೇಶನದಂತೆ ಪ್ರೋತ್ಸಾಹ ಧನ ನೀಡುವದರೊಂದಿಗೆ ತರಬೇತಿ ನೀಡಲಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದರು.

ಶಿಕ್ಷಣ ಇಲಾಖೆ ಪ್ರಭಾರಿ ಬಿ.ಆರ್.ಸಿ. ಜಿ.ರವೀಂದ್ರ ಜೆಸ್ಕಾಂನ ಎಇ ತಿಪ್ಪೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net