ಸಂಭ್ರಮ ಸಡಗರದ ಮಲ್ಲಿಕಾರ್ಜುನ ದೇವರ ಜಾತ್ರೆ

rathosava
ರಬಕವಿ ಶ್ರೀ ಮಲ್ಲಿಕಾರ್ಜುನ ಹಾಗೂ ಮಹಾದೇವರ ಜಾತ್ರೆ ನಿಮಿತ್ತ ರಥೋತ್ಸವ ಅದ್ದೂರಿಯಾಗಿ ನಡೆಯಿತು.
Published on

ರಬಕವಿ/ಬನಹಟ್ಟಿ: ಮಲ್ಲಿಕಾರ್ಜುನ ಮಹಾರಾಜಕೀ ಜೈ, ಮಹಾಲಿಂಗೇಶ್ವರ ಮಹಾರಾಜಕೀ ಜೈ ಎಂಬ ಜಯಘೋಷಗಳ ಮಧ್ಯೆದಲ್ಲಿ ರಬಕವಿಯ ಮಲ್ಲಿಕಾರ್ಜುನ ದೇವರ ಜಾತ್ರೆ ಸೋಮವಾರ ರಾತ್ರಿ ಸಂಭ್ರಮದಿಂದ ನಡೆಯಿತು.

ಈ ಬಾರಿಯ ರಥೋತ್ಸವಕ್ಕೆ ಹೊಸ ರಥ ಮತ್ತಷ್ಟು ಕಳೆ ತಂದಿತ್ತು. ಎತ್ತರವಾದ ರಥವನ್ನು ಉದ್ದನೆಯ ವೈವಿಧ್ಯಮಯವಾದ ಹೂಗಳಿಂದ ಶೃಂಗರಿಸಲಾಗಿತ್ತು.
ಮಹಾಲಿಂಗಪುರದಿಂದ ಮಹಾಲಿಂಗೇಶ್ವರ ಮೂರ್ತಿ ಹೊತ್ತು ತಂದ ಪಲ್ಲಕ್ಕಿಗಳು ಕೃಷ್ಣಾ ನದಿಗೆ ತೆರಳಿಗೆ ಪವಿತ್ರ ಸ್ನಾನ ಮುಗಿಸಿ ಬಂದ ಬಳಿಕ ರಥವನ್ನು ಭಕ್ತರು ಎಳೆಯುವುದು ವಾಡಿಕೆ. ಮಹಾಲಿಂಗಪುರದ ಮಹಾಲಿಗೇಶ್ವರ ಸಂಸ್ಥಾನ ಮಠದ ಶ್ರೀ ರಾಜೇಂದ್ರ ಸ್ವಾಮೀಜಿ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಭಕ್ತರು ರಥ ಎಳೆದು ಸಂಭ್ರಮಿಸಿದರು. ರಥದ ಮೇಲೆ ಭಕ್ತರು ಬೆಂಡು, ಬೆತ್ತಾಸು ಮತ್ತು ಉತ್ತತಿ ಎಸೆದು ಭಕ್ತಿ ಮೆರೆದರು.

ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಾಲಚಂದ್ರಣ್ಣ ಉಮದಿ, ಈರಣ್ಣ ಗುಣಕಿ, ಎಂ.ಎಸ್. ಬದಾಮಿ, ಗಣಪತಿರಾವ್ ಹಜಾರೆ, ಶಿವಾನಂದ ಬಾಗಲಕೋಟಮಠ, ಬಸವರಾಜ ಎಂಡಿಗೇರಿ, ರಾಜಶೇಖರ ಕುರ್ಲಿ, ಮಲ್ಲೇಶ ಕುಚನೂರ, ಡಾ. ಸಂಗಮೇಶ ಹತಪಕಿ, ಸುಭಾಷ ಮಧುರಖಂಡಿ, ನೀಲಕಂಠ ಮುತ್ತೂರ, ಬಸವರಾಜ ತೆಗ್ಗಿ, ಚಂದ್ರಶೇಖರ ಭುಯ್ಯರ, ಶಂಕರ ಮಲ್ಲನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net