ಸಬ್‌ಇನ್ಸ್ಪೆಕ್ಟರ್ ಶಬರೀಶ್‌ಗೆ ಗೌರವ ಸಮರ್ಪಣೆ

28 ckm 6
ಚಿಕ್ಕಮಗಳೂರಿನ ದೀಪಕ್ ದೊಡ್ಡಯ್ಯ ಅವರ ನಿವಾಸದಲ್ಲಿ ಸಿಎಂ ಪದಕಕ್ಕೆ ಭಾಜನರಾದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶಬರೀಶ್ ಅವರನ್ನು ಯುರೇಕಾ ಅಕಾಡೆಮಿಯಿಂದ ಅಭಿನಂದಿಸಲಾಯಿತು. ದೀಪಕ್ ದೊಡ್ಡಯ್ಯ, ಬಿಸಲೇಹಳ್ಳಿ ಸೋಮಶೇಖರ್, ಮಂಜುನಾಥ್, ಸಚಿನ್ ಸಿಂಗ್, ಶಶಿ ಆಲ್ದೂರು ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ತಾಲೂಕಿನ ವಾಜುವಳ್ಳಿ ಗ್ರಾಮದ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಶಬರೀಶ್ ಇತ್ತೀಚೆಗೆ ಮುಖ್ಯಮಂತ್ರಿಗಳಿAದ ಪದಕ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಅವರ ನಿವಾಸದಲ್ಲಿ ಯುರೇಕಾ ಅಕಾಡೆಮಿ ವತಿಯಿಂದ ಶಬರೀಶ್ ಅವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ದೀಪಕ್ ದೊಡ್ಡಯ್ಯ, ಸಮಾಜದ ಹಿತ ಕಾಪಾಡುವಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆ ಸಾಲಿನಲ್ಲಿ ಜಿಲ್ಲೆಯ ಶಬರೀಶ್ ಮೈಸೂರು ನಗರದಲ್ಲಿ ದಕ್ಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ನಿವೃತ್ತ ಶಿಕ್ಷಕ ಮಂಜುನಾಥ್, ಕಸಾಪ ನಗರಾಧ್ಯಕ್ಷ ಸಚಿನ್‌ಸಿಂಗ್, ಬಿಜೆಪಿ ಮುಖಂಡರಾದ ಪ್ರದೀಪ್, ಶಶಿ ಆಲ್ದೂರು, ಭರತ ನಾಟ್ಯ ಪ್ರವೀಣೆ ಸಂಯುಕ್ತ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net