

ಯಾದಗಿರಿ: ತಾಲೂಕಿನ ಯಡ್ಡಳ್ಳಿ-ಹೊನಗೇರಾ ಗ್ರಾಮದ ಮಧ್ಯದಲ್ಲಿ ನಿರ್ಮಾಸುತ್ತಿರುವ 110 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಸೋಮವಾರ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿಂದೆ ನಮ್ಮ ತಂದೆ ನಾಗನಗೌಡ ಶಾಸಕರಿದ್ದಾಗ ಗೊಂದಡಗಿ, ಕೌಳೂರು, ಕಂದಕೂರ, ಮತ್ತು ಕಾಳಬೆಳಗುಂದಿ ಗ್ರಾಮಗಳಿಗೆ ಸಕರ್ಾರದಿಂದ 110 ಕೆ.ವಿ.ಎ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ ಸರಕಾರದ ಮೇಲೆ ಒತ್ತಡ ಹೇರಿ ಅನುಮೋದನೆ ಪಡೆದಿದ್ದರು. ಈಗಾಗಲೇ ಯಡ್ಡಳ್ಳಿ ಮತ್ತು ಗೊಂದಡಗಿ ಕಾಮಗಾರಿ ಪ್ರಾರಂಭವಾಗಿದ್ದು, ಕೆಲವೇ ದಿನಗಳಲ್ಲಿ ಕಂದಕೂರ, ಕಾಳಬೆಳಗುಂದಿ ಹಾಗೂ ಕೌಳೂರು ಗ್ರಾಮಗಳಲ್ಲಿ ಘಟಕದ ಕಾರ್ಯ ಆರಂಭವಾಗೊಳ್ಳಲಿದೆ ಎಂದರು.
ಅಲ್ಲದೆ, ಗಾಜರಕೋಟ ಗ್ರಾಮದಲ್ಲಿನ 33ಕೆವಿ ವಿದ್ಯುತ್ ಉಪಕೇಂದ್ರವನ್ನು 110 ಕೆವಿ ಮೇಲ್ದರ್ಜೆಗೇರಿಸಲು ಸಂಬಂಧಪಟ್ಟ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಬರುವ ಬೆಸಿಗೆ ವೇಳೆಗೆ ಈ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿವೆ. ಇದರಿಂದ ನನ್ನ ಕ್ಷೇತ್ರದಲ್ಲಿ ಮುಂದಿನ 25ರಿಂದ 30 ವರ್ಷಗಳ ಕಾಲ ವಿದ್ಯುತ್ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಹೇಳಿದರು.