ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೊಡೆದಾಟ

6Dbp5
Published on

ದೊಡ್ಡಬಳ್ಳಾಪುರ: ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಗುರುವಾರ ನೋಂದಣಿ ಕೆಲಸ ಬೇಗ ಮಾಡಿಸುವ ವಿಚಾರಕ್ಕೆ ಪತ್ರಬರಹಗಾರರಿಬ್ಬರು ಬಡಿದಾಡಿಕೊಂಡಿದ್ದು, ಕೌಂಟರ್‌ನ ಗಾಜು ಪುಡಿಪುಡಿಯಾಗಿದೆ. ಪತ್ರಬರಹಗಾರರಾದ ಶ್ರೀಕಾಂತ್ ಮತ್ತು ಜಯಣ್ಣ ನೋಂದಣಿ ಮಾಡಿಸಲು ನಾ ಮುಂದು, ತಾ ಮುಂದು ಎಂದು ಮುಗಿಬಿದ್ದು, ಪರಸ್ಪರ ಜಗಳ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಜಯಣ್ಣಗೆ ಹಣೆ ಭಾಗಕ್ಕೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದೊಡ್ಡಬಳ್ಳಾಪುರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net