ಸಬ್ ಇನ್ಸ್‍ಪೆಕ್ಟರ್‍ಗೆ ಚಾಕು ಇರಿದ ಕಳ್ಳ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಆರೋಪಿಯನ್ನು ಬಂದಿಸಲು ಬಂದಿದ್ದ ಸಬ್ ಇನ್ಸ್‍ಪೆಕ್ಟರ್ ಮೇಲೆ ಚಾಕುವಿನಿಂದ ಇರಿದು ಆರೋಪಿ ಕಳ್ಳ ಪರಾರಿಯಾಗಿರುವ ಘಟನೆ ಕೆಜಿಎಫ್‍ನ ಸೂಸೈಪಾಳ್ಯದಲ್ಲಿ ನಡೆದಿದೆ.
ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಹದೇವಪುರ ಪೆÇೀಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹರಿನಾಥ್ ಬಾಬು ಮೂರು ಸಿಬ್ಬಂದಿಯ ಜತೆಗೆ ಕೆಜಿಎಫ್‍ನ ಸೂಸೈ ಪಾಳ್ಯದ ನಿವಾಸಿ ಅಪ್ಪೆನ್ ಎಂಬವನನ್ನು ಬಂಧಿಸಲು ತಡರಾತ್ರಿ ಬಂದಿದ್ದರು. ಈ ವೇಳೆ ಸಬ್ ಇನ್ಸ್‍ಪೆಕ್ಟರ್ ಅವರ ಎರಡು ಕೈಗಳುಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.ಆರೋಪಿಯಿಂದ ಹಲ್ಲೆಗೆ ಒಳಗಾದ ಸಬ್ ಇನ್ಸ್‍ಪೆಕ್ಟರ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸಿಬ್ಬಂದಿಗಳು ದಾಖಲು ಪಡಿಸಿದ್ದಾರೆ.
ಮಹದೇವಪುರ ಠಾಣೆಯಿಂದ ತಡರಾತ್ರಿ ಆರೋಪಿಯನ್ನು ಬಂಧಿಸಲು ಸೂಸೈಪಾಳ್ಯಂಗೆ ಭೇಟಿ ನೀಡುವ ಮನ್ನ ಸ್ಥಳೀಯ ಕೆಜಿಎಫ್ ಪೆÇಲೀಸರಿಗೆ ಮಾಹಿತಿ ನೀಡಿರಲಿಲ್ಲ ಎನ್ನಲಾಗುತ್ತಿದೆ.
ಆರೋಪಿ ಅಪ್ಪೆನ್ ವಿರುದ್ದ ಕೆಜಿಎಫ್ ಸೇರಿದಂತೆ ಬೆಂಗಳೂರಿನ ಹಲವು ಪೆÇೀಲೀಸ್ ಠಾಣೆಯಲ್ಲಿ ಪ್ರಕರಣಗಳು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಕೆಜಿಎಫ್‍ನ ಅಂಡರ್ ಸನ್ ಪೆÇೀಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಆರೋಪಿಗಾಗಿ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net