

ವಿಜಯವಾಣಿ ಸುದ್ದಿಜಾಲ ಆನೇಕಲ್
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಭಾನುವಾರ ಮಧ್ಯಾಹ್ನ ಸಫಾರಿಗೆ ಹೋದ ಬಸ್ ಮೇಲೆ ಚಿರತೆ ದಾಳಿ ಮಾಡಿದ್ದು, ಬಸ್‌ನಲ್ಲಿದ್ದ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಚಿರತೆ ಸಫಾರಿಯ ತೆರೆದ ಪ್ರದೇಶದಲ್ಲಿ ಚಿರತೆಗಳನ್ನು ಬಿಡಲಾಗಿದ್ದು, ಬಸ್ ನೋಡಿದ ಚಿರತೆ ಎಡಭಾಗದ ಹಿಂಬದಿಯ ಸೀಟ್ ಬಳಿ ಏಕಾಏಕಿ ಹಾರಿ, ಮೆಶ್ ಹಾಕಿದ್ದ ಕಂಬಿಗಳನ್ನು ಹಿಡಿದು ಕೆಲ ಹೊತ್ತು ಒಳಗೆ ಕಾಲು ಹಾಕಲು ಯತ್ನಿಸಿದೆ, ಆದರೆ ಮೆಶ್ ಇದ್ದ ಹಿನ್ನೆಲೆ ಒಳಗೆ ಹೋಗಲು ಸಾಧ್ಯವಾಗಿಲ್ಲ. ಆದರೆ ಬಸ್ ಒಳಗಿದ್ದ ಪ್ರವಾಸಿಗರು ಆತಂಕದಿಂದ ಕೂಗಾಡಿದ್ದಾರೆ.
ಸಫಾರಿ ವಾಹನಗಳಿಗೆ ಪ್ರತಿಯೊಂದಕ್ಕೂ ಕಬ್ಬಿಣದ ಮೆಶ್ ಹಾಕ್ಕಿದ್ದರಿಂದ ಯಾವುದೇ ಅನಾಹುತವಾಗಿಲ್ಲ. ಈ ಹಿಂದೆಯೂ ಸಿಂಹ ಒಂದು ಇದೇ ರೀತಿ ಸಫಾರಿಗೆ ಹೋದ ಬಸ್ ಮೇಲೆ ಹಾರಿತ್ತು,
ಚಿರತೆಗಳು ಸಾಮಾನ್ಯವಾಗಿ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿ. ವಾಹನಗಳನ್ನು ನೋಡಿದಾಗ ಸ್ವಲ್ಪ ಭಯಪಡುತ್ತವೆ, ಬಸ್ ನೋಡಿದ ಚಿರತೆ ಭಯಪಟ್ಟು ಮೇಲೆ ಹಾರಿರುವ ಸಾಧ್ಯತೆ ಹೆಚ್ಚಾಗಿದೆ.
ಚಾಲಕರಿಗೆ ಸೂಚನೆ: ಬನ್ನೇರುಘಟ್ಟ ಉದ್ಯಾನವನದ ವ್ಯಾಪ್ತಿಯ ತೆರೆದ ಪ್ರದೇಶದಲ್ಲಿ ಚಿರತೆಗಳನ್ನು ಬಿಡಲಾಗಿದ್ದು, ಪ್ರವಾಸಿಗರು ಆಗಾಗ ಬಸ್‌ನಲ್ಲಿನ ಕಿರಿದಾಗ ಜಾಗದಿಂದ ಹೊರಗೆ ಕೈ ಹಾಕಿ ಪ್ರಾಣಿಗಳ ಫೋಟೋಗಳನ್ನು ತೆಗೆಯಲು ಮುಂದಾಗುತ್ತಾರೆ. ಇಂತಹ ಸಂದರ್ಭದಲ್ಲಿ ಚಿರತೆ ಸಫಾರಿ ಒಳಗೆ ಹೋಗುವಾಗ ಚಾಲಕರು ಕಡ್ಡಾಯವಾಗಿ ಪ್ರವಾಸಿಗರಿಗೆ ಸೂಚನೆ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಬಸ್ ಫಾಲೋ ಮಾಡಿದ ಚೀತಾ: ಬಸ್ ಮೇಲೆ ಹತ್ತಿ ವಾಪಾಸ್ ಕೆಳಗೆ ಇಳಿದ ಚಿರತೆ ಬಸ್ ಮುಂದೆ ಹೋಗುತ್ತಿದ್ದರೂ ಸಹ ಹಿಂದೆ ಕೆಲ ಹೊತ್ತು ಪಕ್ಕದಲ್ಲಿ ಹೋಗಿದ್ದು, ಪ್ರವಾಸಿಗರು ಆತಂಕಪಡುವ ಪರಿಸ್ಥಿತಿ ಎದುರಾಗಿತ್ತು. ಚಿರತೆ ಬಸ್ ಮೇಲೆ ಹಾರುತ್ತಿರುವ ಹಾಗೂ ಅಟ್ಯಾಕ್ ಮಾಡಲು ಯತ್ತಿಸುತ್ತಿರುವ ವಿಡಿಯೋವನ್ನು ಮತ್ತೊಂದು ವಾಹನದ ಪ್ರವಾಸಿಗರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಚಿರತೆ ಸಫಾರಿಯಲ್ಲಿ ಭಾನುವಾರ ಮಧ್ಯಾಹ್ನ ಬಸ್ ಮೇಲೆ ಚಿರತೆ ಹಾರಿದೆ. ಆದರೆ ಪ್ರತಿಯೊಂದು ಬಸ್‌ಗೆ ಕಬ್ಬಿಣ ಹಾಕಿರುವುದರಿಂದ ತೊಂದರೆ ಆಗಿಲ್ಲ. ಸುರಕ್ಷತೆಯ ದೃಷ್ಟಿಯಿಂದ ನಾವು ಇನ್ನು ಮುಂದೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುತ್ತೇವೆ, ಚಿರತೆಗಳು ಸಾಮಾನ್ಯವಾಗಿ ಈ ರೀತಿ ಮಾಡುತ್ತವೆ. ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಸೂರ್ಯಸೇನ್ಬ, ನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ