ಸಪ್ಪೆಯಾದ ಪ್ರೇಮಿಗಳ ದಿನ

h14-Betta 2
Published on

ಹುಬ್ಬಳ್ಳಿ: ನಗರದಲ್ಲಿ ಭಾನುವಾರ ಪ್ರೇಮಿಗಳ ದಿನಾಚರಣೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರೇಮಿಗಳ ದಿನ ಆಚರಿಸುವ ಜೋಡಿಗೆ ಕಪ್ಪುಮಸಿ ಬಳಿಯುವುದಾಗಿ ಹಿಂದುಪರ ಕೆಲ ಸಂಘಟನೆಗಳು ಎಚ್ಚರಿಕೆ ನೀಡಿದ್ದರು. ಈ ಭಯದಿಂದಲೂ ಯುವಜನರು ಉದ್ಯಾನಗಳಲ್ಲಿ ಕಾಣಿಸಲಿಲ್ಲ. ಮೇಲಾಗಿ, ಭಾನುವಾರದಂದು ಕಾಲೇಜುಗಳಿಗೆ ರಜೆ ಇದ್ದಿದ್ದರಿಂದ ಯುವಜನರು ಎಂದಿನಂತೆ ರಸ್ತೆಗೆ ಇಳಿಯಲಿಲ್ಲ.

ನೃಪತುಂಗ ಬೆಟ್ಟದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಆ ಉದ್ಯಾನಕ್ಕೆ ಬೀಗ ಹಾಕಲಾಗಿತ್ತು. ಆದರೂ ಬೆಟ್ಟದ ಸುತ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಇಂದಿರಾ ಗಾಜಿನ ಮನೆಗೆ ಮುಕ್ತ ಅವಕಾಶ ಇತ್ತಾದರೂ, ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಹೀಗಾಗಿ ಅಲ್ಲಿಯೂ ಯುವಜೋಡಿಗಳು ಕಾಣಿಸಲಿಲ್ಲ. ತೋಳನಕೆರೆ ಹಾಗೂ ಇತರ ಕೆಲವು ಪ್ರದೇಶಗಳಲ್ಲಿ ಒಂದಿಷ್ಟು ಜೋಡಿಗಳ ಓಡಾಟ ಕಂಡುಬಂದಿತು. ಆದರೆ, ಸಾರ್ವಜನಿಕರ ಓಡಾಟವೂ ಇದ್ದುದರಿಂದ ಯುವ ಜೋಡಿಗಳು ಹೆಚ್ಚು ಸಮಯ ಅಲ್ಲಿ ನಿಲ್ಲಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net