ಸಪ್ತಮಾತೃಕೆ ಅಮ್ಮನವರ ವಾರ್ಷಿಕ ಮಹೋತ್ಸವ ಸಂಪನ್ನ

1 ckm 6
ನಗರದ ಬಾರ್‌ಲೈನ್ ರಸ್ತೆಯಲ್ಲಿ ಶ್ರೀ ವಿನಾಯಕ ಮತ್ತು ಸಪ್ತಮಾತೃಕೆ ಅಮ್ಮನವರ ದೇವಾಲಯದ ಏಳನೇ ವಾರ್ಷಿಕ ಮಹೋತ್ಸವು ಹೋಮಹವನದಿ, ಧಾರ್ಮಿಕ ಪೂಜಾವಿಧಿ ವಿಧಾನಗಳಿಂದ ಅತ್ಯಂತ ಶ್ರದ್ದಾಭಕ್ತಿಯಿಂದ ಶುಕ್ರವಾರ ಸಂಪನ್ನಗೊAಡಿತು.
Published on

ಚಿಕ್ಕಮಗಳೂರು: ನಗರದ ಬಾರ್‌ಲೈನ್ ರಸ್ತೆಯಲ್ಲಿ ಶ್ರೀ ವಿನಾಯಕ ಮತ್ತು ಸಪ್ತಮಾತೃಕೆ ಅಮ್ಮನವರ ದೇವಾಲಯದ ಏಳನೇ ವಾರ್ಷಿಕ ಮಹೋತ್ಸವು ಹೋಮಹವನದಿ, ಧಾರ್ಮಿಕ ಪೂಜಾವಿಧಿ ವಿಧಾನಗಳಿಂದ ಅತ್ಯಂತ ಶ್ರದ್ದಾಭಕ್ತಿಯಿಂದ ಶುಕ್ರವಾರ ಸಂಪನ್ನಗೊAಡಿತು.

ಗುರ್ಭಗುಡಿಯಲ್ಲಿ ಶ್ರೀ ಪ್ರಾಯ್ಮಿ, ಶ್ರೀ ಮಾಹೇಶ್ವರಿ, ಶ್ರೀ ಕೌಮಾರಿ, ಶ್ರೀ ವೈಷ್ಣವಿ, ಶ್ರೀ ವಾರಾಹಿ, ಶ್ರೀ ಇಂದ್ರಾಣಿ ಮತ್ತು ಶ್ರೀ ಚಾಮುಂಡ ಸಪ್ತಮಾತೃ ದೇವತೆಗಳಿಗೆ ವಿವಿಧ ಅಭಿಷೇಕ ನಡೆಸಲಾಯಿತು. ಬಳಿಕ ವಿಶೇಷ ಅಲಂಕಾರದೊAದಿಗೆ ಭಕ್ತಾಧಿಗಳು ದರ್ಶನ ಭಾಗ್ಯ ಪಡೆದುಕೊಂಡರು.

ಮಹಿಳೆಯರು, ಮಕ್ಕಳು ದೇವಾಲಯದ ಆವರಣದಲ್ಲಿ ಭಜನೆ, ಭಕ್ತಿಗೀತೆಗಳನ್ನು ಹಾಡಿದರು. ಮಹಾಮಂಗಳಾರತಿ ಬಳಿಕ ದೇವಾಲಯದ ಮುಖ್ಯಸ್ಥ ಶಿವಣ್ಣ ಅವರ ನೇತೃತ್ವದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಪೂಜಾ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಬಿ.ಶೀಲಾ ದಿನೇಶ್, ದೇವಾಲಯ ಭಕ್ತಾಧಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net