ಸನ್‌ಸಿಟಿಗಿಲ್ಲ ಸೋಲಾರ್ ಪಾರ್ಕ್ ಭಾಗ್ಯ

05
Published on

ಕಲಬುರಗಿ : ಕಲಬುರಗಿ ತಾಲೂಕಿನ ಫಿರೋಜಾಬಾದ್‌ನಲ್ಲಿ ಸ್ಥಾಪಿಸಲು ಉz್ದೆÃಶಿಸಿದ್ದ ೫೦೦ ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಸದ್ದಿಲ್ಲದೆ ಬೀದರ್ ಜಿಲ್ಲೆಗೆ ಎತ್ತಂಗಡಿಯಾಗಿದ್ದು, ತೊಗರಿ ನಾಡಿನ ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಗೆ ಬರಬೇಕಾದ ಹಲವು ಯೋಜನೆಗಳು ಬೇರೆ ಬೇರೆ ಕಡೆ ಸ್ಥಳಾಂತರಗೊಳ್ಳುತ್ತಿವೆ ಎಂಬ ಸ್ಥಳೀಯರ ಆಕ್ರೋಶದ ನಡುವೆಯೇ ಈಗ ಸೋಲಾರ್ ಪಾರ್ಕ್ ಕೈತಪ್ಪಿ ನೆರೆಯ ಬೀದರ್ ಜಿಲ್ಲೆ ಪಾಲಾಗಿದೆ. ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರೂ ಆದ ಬೀದರ್ ಸಂಸದ ಭಗವಂತ ಖೂಬಾ ಅವರ ಆಸಕ್ತಿಯಿಂದಾಗಿ ಸೋಲಾರ್ ಪಾರ್ಕ್ ಇಲ್ಲಿಂದ ಅವರ ತವರು ಜಿಲ್ಲೆಗೆ ಸ್ಥಳಾಂತರವಾಗಿದೆ ಎನ್ನಲಾಗಿದೆ.

ಫಿರೋಜಾಬಾದ್ ಹತ್ತಿರ ಮೊದಲು ಥರ್ಮಲ್ ಪವರ್ ಸ್ಥಾಪಿಸಲು ಉz್ದÉÃಶಿಸಲಾಗಿತ್ತು. ಅದಕ್ಕಾಗಿ ರೈತರ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಕೊನೇ ಘಳಿಗೆಯಲ್ಲಿ ಅದು ರದ್ದಾಯಿತು. ಅಲ್ಲಿ ಸೋಲಾರ್ ಪಾರ್ಕ್ ಮಾಡುವ ಪ್ರಸ್ತಾವನೆ ಇತ್ತು. ಇದೀಗ ಅದು ಸಹ ಎತ್ತಂಗಡಿಯಾಗಿದೆ. ಈ ಜಾಗದಲ್ಲೇ ಕೇಂದ್ರದ ಮೆಗಾ ಟೆಕ್ಸ್ಟೈಲ್ ಪಾರ್ಕ್ ಬರುತ್ತಿರುವುದರಿಂದಾಗಿ ಸೋಲಾರ್ ಪಾರ್ಕ್ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಒಂದು ಕೊಟ್ಟು ಇನ್ನೊಂದನ್ನು ಕಸಿದುಕೊಳ್ಳುವುದರಲ್ಲಿ ಅರ್ಥವೇನಿದೆ? ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ (೨೦೨೧-೨೨ನೇ ಸಾಲಿನ ಬಜೆಟ್‌ನಲ್ಲಿ) ಫಿರೋಜಾಬಾದ್‌ನಲ್ಲಿ ೫೦೦ ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರು. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕ್ರೆಡಲ್) ವತಿಯಿಂದ ಈ ಸೋಲಾರ್ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದಿದ್ದರು. ಆದರೆ ಅಂತಿಮವಾಗಿ ಈಗ ಇದು ಬೀದರ್‌ಗೆ ಹೋಗಿದೆ. ಫಿರೋಜಾಬಾದ್‌ನಲ್ಲಿ ಮೆಗಾ ಟೆಕ್ಸ್ಟೈಲ್ ಪಾರ್ಕ್ ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದಾರೆ. ಆದರೆ ಹೂಡಿಕೆಗೆ ಉದ್ಯಮಿಗಳು ಇನ್ನೂ ಮುಂದೆ ಬಂದಿಲ್ಲ. ಹೀಗಾಗಿ ಕೆಲಸ ಶುರುವಾಗಿಲ್ಲ.

ಕಲಬುರಗಿ ಜಿಲ್ಲೆಯ ಯೋಜನೆಗಳು ಒಂದೊAದಾಗಿ ಕೈತಪ್ಪುತ್ತಿವೆ. ಐಐಐಟಿ ಧಾರವಾಡ ಜಿಲ್ಲೆಗೆ ಸ್ಥಳಾಂತರಗೊAಡಿತು. ಕಲಬುರಗಿ ಇಎಸ್‌ಐ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಮೂಲಕ ಏಮ್ಸ್ ಮಾಡುವ ಪ್ರಸ್ತಾವನೆಯಿತ್ತು. ಇದಕ್ಕಾಗಿ ಗುಲ್ಬರ್ಗ ವಿಶ್ವವಿದ್ಯಾಲಯ ಸ್ಥಳವನ್ನು ನೀಡಲು ಒಪ್ಪಿತ್ತು. ಆದರೆ ಅದು ಸಾಕಾರವಾಗಲಿಲ್ಲ. ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಗೆ ಒಲವು ತೋರಿ, ಈ ಹಿಂದಿನ ಕುಲಪತಿಗಳು ಬೆಂಗಳೂರಿನಲ್ಲಿ ಮಾಡಲು ಮುಂದಾದರು. ಪ್ರಬಲ ವಿರೋಧದ ಕಾರಣದಿಂದ ಬೆಂಗಳೂರು ವಿವಿ ಈ ಪ್ರಸ್ತಾವನೆ ಕೈಬಿಟ್ಟಿತು. ಆದರೆ ಈ ಕೇಂದ್ರ ಕಲಬುರಗಿಯಲ್ಲೂ ಆಗಲಿಲ್ಲ. ಇವೆಲ್ಲ ಸ್ಥಳೀಯರಿಗೆ ಕೆರಳಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net