

ಕಲಬುರಗಿ: ನಗರದ ಸನ್‌ರೈಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಸನ್‌ರೈಸ್ ಆಂಕೋ ಕೇರ್ ಉದ್ಘಾಟಿಸಲಿದ್ದು, ದಿನದ ೨೪ ಗಂಟೆಯೂ ತಜ್ಞ ವೈದ್ಯರ ತಂಡ ಕ್ಯಾನ್ಸರ್ ತಪಾಸಣೆ, ಚಿಕಿತ್ಸೆ ನಡೆಸಲಿದೆ ಎಂದು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಸಲ್ಮಾನ್ ಪಟೇಲ್ ತಿಳಿಸಿದರು.
ಅತ್ಯಾಧುನಿಕ ಸೌಲಭ್ಯಗಳುಳ್ಳ ಘಟಕವಿದ್ದು, ಎಲ್ಲ ತಪಾಸಣೆ, ಶಸ್ತçಚಿಕಿತ್ಸಾ ಯಂತ್ರಗಳು ಇವೆ. ಕೀಮೋಥೆರಪಿ, ಇಮ್ಯುನೋಥೆರಪಿ ಮತ್ತು ಟಾರ್ಗೆಟೆಡ್‌ಥೆರಪಿ ಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದ ಅನುಭವಿ ತಜ್ಞ ವೈದ್ಯ ಡಾ.ಸಂದೀಪ ಕೆ.ಎಸ್. ಅವರು ಪೂರ್ಣಾವಧಿ ತಪಾಸಣೆ, ಚಿಕಿತ್ಸೆ ನೀಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಯಾನ್ಸರ್ ಮಾರಕ ರೋಗವಾಗಿದ್ದು, ನಮ್ಮ ಭಾಗದ ಜನರಲ್ಲಿ ಜಾಗೃತಿ ಕೊರತೆ ಇದೆ. ಆದ್ದರಿಂದ ತಪಾಸಣೆ ಹೆಚ್ಚಳ ಮಾಡಿದಷ್ಟು ಆರೋಗ್ಯ ಸೇವೆ ಒದಗಲಿದೆ. ಬಾಯಿ, ಗಂಟಲು, ರಕ್ತ, ಗರ್ಭಕೋಶ ಸೇರಿ ಎಲ್ಲ ರೀತಿಯ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ, ಶಸ್ತçಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ಒಂದು ವಾರ ಉಚಿತ ತಪಾಸಣೆ, ರಿಯಾಯಿತಿ: ವಿಶ್ವಕ್ಯಾನ್ಸರ್ ದಿನ, ಕ್ಯಾನ್ಸರ್ ಘಟಕ ಉದ್ಘಾಟನೆ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಫೆ.೩ರಿಂದ ೧೦ರವರೆಗೆ ಉಚಿತ ತಪಾಸಣೆ, ರಿಯಾಯಿತಿ ದರದಲ್ಲಿ ಪ್ಯಾಕೇಜ್ ರೂಪದಲ್ಲಿ ಸ್ಕಿöçÃನಿಂಗ್ ಅವಕಾಶ ನೀಡಲಾಗಿದೆ. ಸಿಬಿಸಿ, ಎಲ್‌ಎಫ್‌ಟಿ, ಆರ್‌ಎಫ್‌ಟಿ, ಪಿಎಸ್‌ಎ, ಎಕ್ಸ್-ರೇ ಚೆಸ್ಟ್, ಯುಸಿಜಿ, ಅಬಾಡಮೆನ್ ಒಳಗೊಂಡ ಸ್ತಿçÃ, ಪುರುಷರ ಕ್ಯಾನ್ಸರ್ ಪ್ಯಾಕೇಜ್‌ಗೆ ಮೂಲ ಬೆಲೆಯ ಶೇ.೫೦ ರಿಯಾಯಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಡಾ.ಅಹ್ಮದ್ ಫರಾಜ್ ಪಟೇಲ್, ಡಾ.ರಫೀಕ್, ಆಡಳಿತಾಧಿಕಾರಿ ರಾಜು ಇತರರಿದ್ದರು.