ಸನ್ಯಾಸಿನಿಯರ ಬಿಡುಗಡೆಗೆ ಆಗ್ರಹಿಸಿ ಮನವಿ

1 ckm 5
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಹೇಮಂತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪದಾಧಿಕಾರಿಗಳು ಛತ್ತಿಸ್‌ಗಡದಲ್ಲಿ ತಪ್ಪು ಗ್ರಹಿಕೆಯಿಂದ ಬಂಧಿಸಿರುವ ಕೇರಳ ಮೂಲದ ಕ್ರೆÊಸ್ತ ಧರ್ಮದ ಅಮಾಯಕ ಸನ್ಯಾಸಿನಿಯರನ್ನು ಶೀಘ್ರವೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಬೆನಡಿಕ್ಟ್ ಜೇಮ್ಸ್, ರಾಬರ್ಟ್ ಯೇಸುದಾಸ್, ಡೇನಿಯಲ್ ಪ್ರಾನ್ಸಿಸ್, ಜೋಸೆಫ್, ಆನಂದ್, ಜೇಮ್ಸ್ ಜೋಸೆಪ್, ಮ್ಯಾಥ್ಯೂ, ರೋಹನ್, ಗೀತಾ, ಅಗಸ್ಟಿನ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಛತ್ತಿಸ್‌ಗಡದಲ್ಲಿ ತಪ್ಪು ಗ್ರಹಿಕೆಯಿಂದ ಬಂಧಿಸಿರುವ ಕೇರಳ ಮೂಲದ ಕ್ರೆÊಸ್ತ ಧರ್ಮದ ಅಮಾಯಕ ಸನ್ಯಾಸಿನಿಯರನ್ನು ಶೀಘ್ರವೇ ಬಿಡುಗಡೆಗೊಳಿಸಬೇಕು ಎಂದು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪದಾಧಿಕಾರಿಗಳು ಶುಕ್ರವಾರ ಶಿರಸ್ತೇದಾರ್ ಹೇಮಂತ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಬೆನೆಡಿಕ್ಟ್ ಜೇಮ್ಸ್, ಕ್ರೆÊಸ್ತ ಧರ್ಮದ ರೋಮನ್ ಕ್ಯಾಥೋಲಿಕ್ ಪಂಗಡದಲ್ಲಿ ಯಾವುದೇ ಕಾರಣಕ್ಕೂ ಮತಾಂತರಕ್ಕೆ ಅವಕಾಶವಿಲ್ಲ. ಹಾಗಾಗಿ ಕೇರಳ ಮೂಲದ ಕೈಸ್ತ ಸನ್ಯಾಸಿನಿಯರನ್ನು ತಪ್ಪುಗ್ರಹಿಕೆಯಿಂದ ಬಂಧಿಸಿರುವುದು ಖಂಡನೀಯ ಎಂದು ಹೇಳಿದರು.

ಭಾರತದಲ್ಲಿ ರೋಮನ್ ಕ್ಯಾಥೋಲಿಕ್ ಸಮುದಾಯವು ದಶಕಗಳಿಂದ ಶಿಕ್ಷಣ, ಆರೋಗ್ಯ ಹಾಗೂ ಸೇವಾ ಕ್ಷೇತ್ರಗಳಲ್ಲಿ ಸಮಾಜಕ್ಕೆ ನಿಸ್ವಾರ್ಥದಿಂದ ಕೊಡುಗೆ ನೀಡುತ್ತಿದೆ. ಇದನ್ನು ತಪ್ಪು ಗ್ರಹಿಸುವುದು ದುರದೃಷ್ಟ ಕರ. ಇಂಥ ಸೇವಾ ಸಂಸ್ಥೆಗಳಲ್ಲಿ ಮತಾಂತರ ಎಂಬ ಒಂದೇ ಒಂದು ಉದಾಹರಣೆಗಳು ಕಂಡುಬAದಿರುವುದಿಲ್ಲ ಎಂದರು.

ಕ್ರೆÊಸ್ತ ಸನ್ಯಾಸಿನಿಯರ ಬಂಧನದ ಪ್ರಕರಣದಿಂದ ರೋಮನ್ ಕ್ಯಾಥೋಲಿಕ್ ಸಮುದಾಯಕ್ಕೆ ನೋವುಂಟಾಗಿದೆ. ಅಲ್ಲದೇ ಈ ಬಂಧನವು ಮತಾಂತರ ಆರೋಪಕ್ಕಿಂತ ವ್ಯಕ್ತಿಯ ಧರ್ಮದ ತಾರತಮ್ಯದಿಂದ ಉಂಟಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ತಪ್ಪು ನಡೆದಿದ್ದರೆ ಕ್ರಮಕೈಗೊಳ್ಳಲಿ. ಯಾವುದೇ ರೀತಿಯ ಅಭ್ಯಂತರವಿಲ್ಲ ಎಂದು ತಿಳಿಸಿದರು.

ನೂರಾರು ವರ್ಷಗಳಿಂದ ಭಾರತೀಯರಾದ ಕ್ರೆÊಸ್ತ ಕ್ಯಾಥೋಲಿಕ್ ಧರ್ಮದವರು ಸಂವಿಧಾನದಡಿ ನಿಷ್ಟೆ, ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡು ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಬಾಗಿಯಾಗಿದೇ ಗೌರವಯುತವಾಗಿ ಬದುಕು ಕಟ್ಟಿಕೊಂಡಿz್ದೆÃವೆ. ಹೀಗಾಗಿ ಕಾನೂನಿನ ಚೌಕಟ್ಟಿನೊಳಗೆ ಪ್ರಕರಣ ಇತ್ಯರ್ಥಪಡಿಸಿ ಸನ್ಯಾಸಿನಿಯರಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು.

ಸAವಿಧಾನದ ಅನುಚ್ಚೇಧದ ಪ್ರಕಾರ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರö್ಯವಿದೆ. ಈ ಹಕ್ಕಿ ನಡಿಯಲ್ಲಿ ನಮ್ಮ ಧರ್ಮ ಆಚರಿಸಲು ಹಾಗೂ ನಂಬಿಕೆಯ ಪ್ರಕಾರ ಸೇವಾ ಚಟುವಟಿಕೆಗಳಲ್ಲಿ ಹಕ್ಕು ಹೊಂದಿz್ದÉÃವೆ. ಹೀಗಾಗಿ ಕೂಡಲೇ ಈ ವಿಚಾರವಾಗಿ ಕೂಲಂಕಶವಾಗಿ ಪರಿಶೀಲಿಸಿ ಅಮಾಯಕ ಕ್ರೆÊಸ್ತ ಸನ್ಯಾಸಿನಿಯರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬರ್ಟ್ ಯೇಸುದಾಸ್, ಸಂಚಾಲಕ ಡೇನಿಯಲ್ ಪ್ರಾನ್ಸಿಸ್, ಹಿರಿಯ ಮುಖಂಡ ಜೋಸೆಫ್, ನಗರ ಉಪಾಧ್ಯಕ್ಷ ಆನಂದ್, ಸದಸ್ಯರಾದ ಜೇಮ್ಸ್ ಜೋಸೆಪ್, ಮ್ಯಾಥ್ಯೂ, ರೋಹನ್, ಗೀತಾ, ಅಗಸ್ಟಿನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net