

ಕಲಬುರಗಿ: ರಾಮಾಯಣ ಸೇರಿ ಎಲ್ಲ ಮಹಾ ಗ್ರಂಥಗಳು ಮಾನವ ಕಲ್ಯಾಣವನ್ನು ಸಾರಿದ್ದು, ಜನರನ್ನು ಸನ್ಮಾರ್ಗದಲ್ಲಿ ಸಾಗಲು ಪ್ರೇರಣೆಯಾಗಿವೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿ, ಮಹಾನ ಚಿಂತನೆ, ಆದರ್ಶ, ಶೈಲಿ, ಕಲ್ಪನೆಯನ್ನು ಒಳಗೊಂಡ ರಾಮಾಯಣ ಕಾವ್ಯ ಇಡೀ ಜಗತ್ತಿನ ಚಿಂತನೆ ಬದಲಾಯಿಸುವ ಶಕ್ತಿ ಹೊಂದಿದೆ. ಮನುಷ್ಯ ಬದುಕಿನ ನೈಜ ಚಿತ್ರಣವನ್ನು ನೀಡಿ, ನಾಡಿಗೆ ಬೆಳಕಾಗಿದ್ದಾರೆ ಎಂದರು.
ಸಹಾಯಕ ಆಯುಕ್ತೆ ಮಮತಾ ಕುಮಾರಿ ಉದ್ಪಾಟಿಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿ, ಎಂಬಿಬಿಎಸ್‌ನಲ್ಲಿ ಅತ್ಯುತ್ತಮ ಅಂಕ ಪಡೆದ, ಪ್ರವೇಶ ಪಡೆದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಸಂತೋಷ , ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಚೆನ್ನಪ್ಪ ಸುರಪುರಕರ್, ಪ್ರಮುಖರಾದ ನಂದಕುಮಾರ್ ಮಾಲಿಪಾಟೀಲ್, ಶರಣು ಸುಬೇದಾರ್, ಸುಧೀರ್, ಡಾ.ರಾಜಶೇಖರ ಮಾಂಗ್ ಇತರರಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ ಸ್ವಾಗತಿಸಿದರು.