ಸನ್ಮಾರ್ಗದಲ್ಲಿ ಮುನ್ನಡೆಸುವವರೇ ಗುರು

Guruvandane
Published on

ಚಿತ್ರದುರ್ಗ: ದಾರಿ ತಪ್ಪುವ ಶಿಷ್ಯರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವವರು, ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವವರೇ ಗುರು ಎಂದು ಶಿವಲಿಂಗಾನಂದ ಶ್ರೀ ತಿಳಿಸಿದರು.

ಕಬೀರಾನಂದಾಶ್ರಮದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಭಾನುವಾರ ನಡೆದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಜ್ಞಾನ ಧಾರೆ ಎರೆಯುವ ಗುರುವಿನ ಕಾರುಣ್ಯ-ಕೃಪೆ ಇಲ್ಲದೆ, ಸಮಾಜದಲ್ಲಿ ಮುಂದಕ್ಕೆ ಬರಲು ಸಾಧ್ಯವಿಲ್ಲ. ಮನಸ್ಸಿನ ದುಃಖವನ್ನು ಕಳೆಯುವ ಶಕ್ತಿಯೂ ಗುರುವಿಗಿದೆ ಎಂದರು.

ರಾಮ ಸುಬ್ಬರಾಯ, ಮಂಜುನಾಥ್ ಗುಪ್ತ, ರಾಮಮೂರ್ತಿ, ನಾಗರಾಜ್ ಸಂಗಮ್, ಗೋಪಾಲಸ್ವಾಮಿ ನಾಯಕ, ಓಂಕಾರಮೂರ್ತಿ, ಭದ್ರಾವತಿಯ ರಾಮಮೂರ್ತಿ, ಪ್ರಶಾಂತ್, ಹೊಸಳ್ಳಿಯ ಶಿವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net