ಸನ್ಮಾರ್ಗದಲ್ಲಿ ನಡೆಸುವವನೇ ಗುರು

ydg04
Published on

ಕೆಂಭಾವಿ: ಪ್ರತಿಯೊಬ್ಬರ ಬಾಳಿನಲ್ಲಿ ಸುಜ್ಞಾನದ ಬೆಳಕು ಚೆಲ್ಲಿ, ಸದ್ಬುದ್ಧಿ, ಸದ್ವಿಚಾರ ಬಿತ್ತಿ ಸನ್ಮಾರ್ಗದೆಡೆಗೆ ಕೊಂಡೊಯ್ಯುವವನೇ ಗುರು ಎಂದು ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಸುರಪುರ ತಾಲೂಕಾಧ್ಯಕ್ಷ ಪ್ರಕಾಶ ಅಂಗಡಿ ಹೇಳಿದರು.

ಪಟ್ಟಣದ ಗುರು ಕಾಂತೇಶ್ವರ ಜನಕಲ್ಯಾಣ ಸೇವಾ ಪ್ರತಿಷ್ಠಾನದಿಂದ ಹಿರೇಮಠದಲ್ಲಿ ಇತ್ತೀಚಿಗೆ ಹಮ್ಮಿಕೊಂಡ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಸಿಕ ಹುಣ್ಣಿಮೆ ಕಾರ್ಯಕ್ರಮ ಒಂಬತ್ತು ವರ್ಷ ಪೂರೈಸಿ ೧೦೮ನೇ ಮಾಸ ಪೂರೈಸುತ್ತಾ ದಶಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿರುವವುದು ಹೆಮ್ಮೆಯ ವಿಷಯವಾಗಿದೆ. ಶಿವಾನುಭವ ಗೋಷ್ಠಿಯ ಜತೆ ಜತೆಗೆ ಕವಿ, ಕಲಾವಿದರನ್ನು, ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಪೀಠಾಧಿಪತಿ ಶ್ರೀ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು. ವಚನ ಕಂಠಪಾಠದಲ್ಲಿ ಸಾಧನೆ ಮಾಡಿದ ಸಿಯಾ ಆಲಗೂಡ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಲಿಂಗನಗೌಡ ಮಾಲಿ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಯಮನೇಶ ಯಾಳಗಿ ಹಾಗೂ ಶರಣಕುಮಾರ ಯಾಳಗಿ ಇವರಿಂದ ಸಂಗೀತ ನಡೆಯಿತು.

ನಿಂಗನಗೌಡ ದೇಸಾಯಿ, ಮಹಾದೇವಪ್ಪ ವಜ್ಜಲ್, ಮಲ್ಲು ಬಾದ್ಯಾಪುರ, ಗುರುರಾಜ ಕುಲಕರ್ಣಿ, ಪರಶುರಾಮ ನಾರಾಯಣಕರ, ಸುಗೂರಯ್ಯ ಇಂಡಿ, ಹಣಮಂತ ಪಡಸಾಲಿ, ಪ್ರಶಾಂತ ಹಿರೇಮಠ, ಅಭಿಷೇಕ ಪಾಟೀಲ್, ನಿಜಗುಣ ವಿಶ್ವಕರ್ಮ, ಅವ್ವಣ್ಣ ಮಡಿವಾಳಕರ ಇತರರಿದ್ದರು. ಡಾ.ಯಂಕನಗೌಡ ಪಾಟೀಲ್ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net