ಸನ್ಮಾರ್ಗದಲ್ಲಿ ನಡೆದರೆ ಬದುಕು ಸಾರ್ಥಕ

22.KHH-3P
Published on

ಕಾನಹೊಸಹಳ್ಳಿ: ಪ್ರತಿಯೊಬ್ಬರೂ ಬದುಕಿನಲ್ಲಿ ಉತ್ತಮ ಮೌಲ್ಯ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬಯಲುತುಂಬರಗುದ್ದಿ ಗ್ರಾಮದಲ್ಲಿ ಗುರುವಾರ ಉಜ್ಜಿನಿ ಪೀಠದ 107ನೇ ಜಗದ್ಗುರು ಶ್ರೀ ಚನ್ನವೃಷಭ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಶೀರ್ವಚನ ನೀಡಿದರು. ಲೋಕ ಕಲ್ಯಾಣಕ್ಕಾಗಿ ಶಸ್ತ್ರದ ಬದಲು ಶಾಸ್ತ್ರ ಬೋಧನೆ ಮಾಡುವಂತೆ ಭಗವಂತ ಗುರುವಿಗೆ ಸೂಚಿಸಿದ್ದಾನೆ. ಗುರುವಿನ ಮಾರ್ಗದರ್ಶನದೊಂದಿಗೆ ಸಂಸ್ಕಾರಯುತವಾಗಿ ಭಗವಂತನ ಆರಾಧನೆಯನ್ನು ಮಾಡಿದರೆ ದೇವರಿಗೆ ಪ್ರಿಯನಾಗಬಹುದು ಎಂದರು.

ಉಜ್ಜಿನಿ ಪೀಠಕ್ಕೆ 107ನೇ ಜಗದ್ಗುರುಗಳನ್ನು ಕೊಟ್ಟ ಕೀರ್ತಿ ಬಯಲುತುಂಬರಗುದ್ದಿ ಗ್ರಾಮಕ್ಕೆ ಸಲ್ಲುತ್ತದೆ. ಗ್ರಾಮಸ್ಥರಲ್ಲಿ ದೈವ ಭಕ್ತಿ ಅಪಾರವಾಗಿದ್ದು, ಮಳೆ, ಬೆಳೆ ಚೆನ್ನಾಗಿ ಆಗಲಿ. ವಿವಾಹ, ಸಂತಾನ, ಶಿಕ್ಷಣ ವೃದ್ಧಿಸಲಿ ಎಂದು ಅಶೀರ್ವದಿಸಿದರು. ಪ್ರಮುಖರಾದ ಎಚ್. ಎಂ.ವೀರಭದ್ರಯ್ಯ ಸ್ವಾಮಿ, ಎಂ.ಬಸವರಾಜ್, ಜಿ.ಬಸವರಾಜ್, ಪಿ.ವಿ.ರುದ್ರೇಶ್, ಜಿ.ವೀರೇಶ್, ಕೊಟ್ರೇಶ್ ಜಿ., ಜಿ.ಚಿದಾನಂದಪ್ಪ, ಕೆ.ವೀರೇಂದ್ರ, ಮೂಗಪ್ಪ, ಪಿ.ಶೇಖರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net