

ಚಿಕ್ಕೋಡಿ: ಕಾಯಕ ತತ್ತ್ವದಡಿ ನಡೆದು ಅಂತರಂಗದಲ್ಲಿ ದೇವರನ್ನು ಕಾಣಬೇಕು ಎಂದು ಬಸವಾದಿ ಶಿವಶರಣರು ಸನ್ಮಾರ್ಗದ ದಾರಿ ತೋರಿಸಿಕೊಟ್ಟಿದ್ದಾರೆ ಎಂದು ಪ್ರವಚನಗಾರ್ತಿ ಸಾವಿತ್ರಮ್ಮ ವಿಜಯನಗರೆ ಹೇಳಿದರು.
ತಾಲೂಕಿನ ಧುಳಗನವಾಡಿ ಗ್ರಾಮದ ಸದ್ಗುರು ಶರಣರ ಕಲಾಸೇವಾ ಮಂಡಳ ಹಾಗೂ ಖೋತ ಪರಿವಾರದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ೧೦೮ನೇ ಸುವಿಚಾರ ಚಿಂತನ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶರಣ ಧನಪಾಲ ಕಮತೆ ಮಾತನಾಡಿದರು.
ಸಂಕನವಾಡಿಯ ಭಜನಾ ಕಲಾವಿದ ಭೀಮಪ್ಪ ಸುತಾರಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅಪ್ಪಾಸಾಹೇಬ ಖೋತ, ಮಲ್ಲಪ್ಪ ಮೋಳಗೆ, ಶಶಿಕಾಂತ ಜಂಗಿ ಇತರರಿದ್ದರು. ಸುಪ್ರಿಯಾ ಕಲಾಚಂದ್ರ ನಿರೂಪಿಸಿದರು. ಓಂಕಾರ ಖೋತ ಸ್ವಾಗತಿಸಿದರು.