ಸನ್ಮಾನ ಕಾರ್ಯಕ್ರಮ 11ರಂದು

subbanna karkanalli
Published on

ಬೀದರ್: ವಿಶ್ವ ಕನ್ನಡಿಗರ ಸಂಸ್ಥೆ ಹಾಗೂ ವೀರ ಕನ್ನಡಿಗರ ಸೇನೆಯಿಂದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಜೂ.11ರಂದು ಬೆಳಗ್ಗೆ 11.30ಕ್ಕೆ ನಗರದ ರಾಣಿ ಕಿತ್ತೂರು ಚನ್ನಮ್ಮ ವೃತ್ತದ ಹತ್ತಿರದ ಕೃಷ್ಣ ದರ್ಶನಿ ಉಡಪಿ ಹೋಟಲ್ನಲ್ಲಿ ಆಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಉದ್ಘಾಟಿಸುವರು. ಡಾ.ಕಾಶಿನಾಥ ಚಲುವಾ ಅಧ್ಯಕ್ಷತೆ ವಹಿಸುವರು. ಸಾಹಿತಿಗಳಾದ ಸುನೀತಾ ದಾಡಗೆ, ಡಾ.ರಾಮಚಂದ್ರ ಗಣಾಪುರ ಉಪನ್ಯಾಸ ನೀಡಲಿದ್ದಾರೆ. ಅಮೃತ ಪಾಟೀಲ್ ಸಿರನೂರು, ದಿಗಂಬರ ಮಡಿವಾಳ, ಪ್ರೇಮಸಾಗರ ದಾಂಡೇಕರ್, ಉಮೇಶಕುಮಾರ ಸ್ವಾರಳ್ಳಿಕರ್, ದಿಲೀಪಕುಮಾರ ಭೋಸ್ಲೆ, ಸುಧಾಕರ ರಾಜಗೀರಾ, ಎಂ.ಎಸ್. ಮನೋಹರ ಇತರರು ಪಾಲ್ಗೊಳ್ಳುವರು ಎಂದು ವಿಶ್ವ ಕನ್ನಡಿಗರ ಸಂಸ್ಥೆ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net