ಸನ್ಮತಿ ಸೂರ್ಯ ತ್ಯಾಗಿ ಭವನ ಲೋಕಾರ್ಪಣೆ

6KAGWAD1
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 47;
Published on

ಕಾಗವಾಡ: ತಾಲೂಕಿನ ಲೋಕೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸನ್ಮತಿ ಸೂರ್ಯ ತ್ಯಾಗಿ ಭವನವನ್ನು ಮಾಜಿ ಶಾಸಕ ಶ್ರೀಮಂತ ಪಾಟೀಲ ಭಾನುವಾರ ಲೋಕಾರ್ಪಣೆ ಮಾಡಿದರು.

ಶ್ರೀ೧೦೮ ಆಚಾರ್ಯ ಸೂರ್ಯಸಾಗರ ಮುನಿಮಹಾರಾಜರ ಸಾನ್ನಿಧ್ಯದಲ್ಲಿ ಗ್ರಾಮದ ನೂತನ ಶ್ರೀ೧೦೦೮ ಆದಿನಾಥ ದಿಗಂಬರ ಜೈನ ಮಂದಿರ ಮತ್ತು ಮಂದಿರದ ಎದುರಿಗೆ ಮಾನಸ ಸ್ತಂಭದ ನಿರ್ಮಾಣಕ್ಕೆ ಭೂಮಿಪೂಜೆ, ತ್ಯಾಗಿ ಭವನದ ವಾಸ್ತುಶಾಂತಿ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಎರಡು ದಿನಗಳ ಕಾಲ ಧಾರ್ಮಿಕ ವಿಽ ವಿಧಾನಗಳಿಂದ ನಡೆಯುತ್ತಿವೆ.

ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ನಂತರ ಆಚಾರ್ಯ ಸೂರ್ಯಸಾಗರ ಮುನಿಮಹಾರಾಜರ ಪ್ರವಚನ ಕಾರ್ಯಕ್ರಮ ನಡೆಯಿತು.

ಯುವ ಮುಖಂಡ ಶ್ರೀನಿವಾಸ ಪಾಟೀಲ, ಸುಧಾಕರ ಭಗತ, ಮುಂಬೈನ ವಿಶ್ವಸೇನ ಮಿಂಡಾ, ಇಚಲಕರಂಜಿಯ ಮಹಾವೀರ ಕಸಲಿವಾಲ, ಸೇಲಂನ ಅಜಿತ ಕಸಲಿವಾಲ, ಶಿರಗುಪ್ಪಿಯ ಡಾ.ಮಹಾಧವಲ ಭೋಮಾಜ, ಶಿಕೋಹಾಬಾದನ ಇಂದ್ರಧ್ವಜ ಜೈನ, ಅಮೃತ ಕುಡಚಿ, ಅಕಲುಜ್‌ನ ವೈಭವ ದೋಶಿ, ಕುಪವಾಡದ ಅಭಯ ಪಾಟೀಲ, ರವೀಂದ್ರ ದೇವಮೋರೆ, ಡಿ.ಎ.ಪಾಟೀಲ, ರಾಜೇಶ ದೋಶಿ, ಶೇಷರಾಜ ಪಟನಿ, ಭಾವಚಂದ ಪಟನಿ ಹಾಗೂ ಶ್ರಾವಕ-ಶ್ರಾವಕಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net