ಸನ್ನತಿಯಿಂದ ಬೆಂಗಳೂರಿಗೆ ಪಾದಯಾತ್ರೆ ನ.15ರಿಂದ

1311Klb04
Published on

ಕಲಬುರಗಿ: ಬೌದ್ಧ ಕ್ಷೇತ್ರ ಸನ್ನತಿಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಮತ್ತು ಬೌದ್ಧ ಸಮುದಾಯದ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಐತಿಹಾಸಿಕ ಕ್ಷೇತ್ರ ಸನ್ನತಿಯಿಂದ ಬೆಂಗಳೂರಿನ ವಿಧಾನಸೌಧದವರೆಗೆ ಸನ್ನತಿ ಪಂಚಶೀಲ ಪಾದಯಾತ್ರೆಯನ್ನು ನ.೧೫ರಿಂದ ಜ.೨೪ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬೀದರ್ ಆಣದೂರಿನ ವರಜ್ಯೋತಿ ಭಂತೆ ತಿಳಿಸಿದರು.

ಆಂಧ್ರದ ಬುದ್ಧವನ ಮಾದರಿ ಸನ್ನತಿಯಲ್ಲಿ ೨೦೦ ಎಕರೆಯಲ್ಲಿ ಅಭಿವೃದ್ಧಿಪಡಿಸಬೇಕು. ಜಾಗತಿಕ ಮಟ್ಟದ ಸೆವೆನ್ ಸ್ಟಾರ್ ಪ್ರವಾಸಿ ತಾಣ ಮಾಡಲು ೫೦೦ ಕೋಟಿ ರೂ. ಅನುದಾನ ನೀಡಬೇಕು, ನೆನೆಗುದಿಗೆ ಬಿದ್ದಿರುವ ಸನ್ನತಿ ಅಭಿವೃದ್ಧಿ ಮಂಡಳಿ ಪುನಶ್ಚೇತಗೊಳಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿವರ್ಷ ಸಾಮ್ರಾಟ್ ಅಶೋಕ ಸನ್ನತಿ ಉತ್ಸವ ಸರ್ಕಾರದಿಂದ ಆಚರಿಸಬೇಕು. ಬೌದ್ಧ ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಬೌದ್ಧ ಅಭಿವೃದ್ಧಿ ನಿಗಮ ರಚಿಸಿ, ಕನಿಷ್ಠ ೧,೦೦೦ ಕೋಟಿ ಅನುದಾನ ಮೀಸಲಿಡಬೇಕು. ಬುದ್ಧಪೂರ್ಣಿಮೆಗೆ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ಒತ್ತಾಯಿಸಿದರು.

ಭಂತೆ ಬೋಧಿದತ್ತ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಅಶೋಕನ ಒಂಬತ್ತು ಐತಿಹಾಸಿಕ ಸ್ಥಳಗಳ ವೀP್ಷÀಣೆ ಮತ್ತು ಅಧ್ಯಯನ ಮಾಡಿ ಅಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸಲು ಒತ್ತಾಯಿಸಲಾಗುವುದು ಎಂದರು.

೧೫ರAದು ಸನ್ನತಿಯಲ್ಲಿ ಬೆಳಗ್ಗೆ ೧೧ಕ್ಕೆ ಪ್ರಾರಂಭವಾಗುವ ಪಾದಯಾತ್ರೆ ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ, ಚಿತ್ರದುರ್ಗ, ತುಮಕೂರು ಮೂಲಕ ಬೆಂಗಳೂರು ಜಿ¯್ಲೆ ತಲುಪಲಿದೆ. ಜ.೨೪ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸುತ್ತೇವೆ ಎಂದು ವಿವರಿಸಿದರು.

ಬೆಂಗಳೂರಿನ ಭಂತೆ ನಾಗರತ್ನ, ಬೀದರ್‌ನ ಭಂತೆ ಧಮ್ಮದೀಪ, ಧಮ್ಮ ಉಪಾಸಕ ಸುರೇಶ ಕಾನೇಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net